Air India Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎಂದು ಕರೆಯಲಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ಪ್ರಾಥಮಿಕ ವರದಿ ಇದೀಗ ಸಿದ್ಧವಾಗಿದೆ. ವಿಮಾನ ದುರಂತದ ಪ್ರಾಥಮಿಕ ವರದಿಯನ್ನು ಸದ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಗಿದ್ದು, ಘಟನೆಯ ವಿವರವನ್ನು ಶೀಘ್ರದಲ್ಲೇ ಸಾರ್ವಜನಿಕರಿಗೂ ತಿಳಿಸಲಾಗುವುದು.
ಇದನ್ನೂ ಓದಿ: 67 ಮಂದಿಯ ಪ್ರಾಣ ಉಳಿಸಿತು ಈ ಶ್ವಾನ! ಅಚ್ಚರಿ ಮೂಡಿಸುತ್ತದೆ ಪವಾಡದಂತೆ ಬದುಕುಳಿದ ವ್ಯಕ್ತಿಯ ಮಾತು | Himachal Pradesh
ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಭೀಕರ ಅಪಘಾತಕ್ಕೀಡಾದ ಘಟನೆ ಎಂದಿಗೂ ಮರೆಯಲಾಗದು. ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಏರ್ ಇಂಡಿಯಾ ವಿಮಾನ ಅಪಘಾತ, 241 ಪ್ರಯಾಣಿಕರ ಪ್ರಾಣವನ್ನು ಕಸಿದುಕೊಳ್ಳುವುದಲ್ಲದೇ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉಸಿರನ್ನೂ ಕಸಿದುಕೊಂಡಿತು. ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡದಂತೆ ಬದುಕುಳಿದ.
ಅಪಘಾತದ ತನಿಖೆ ನಡೆಸಿದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿ ಮತ್ತು ತನಿಖೆಗೆ ಸಂಬಂಧಿಸಿದ ವಿವರಗಳನ್ನು ವರದಿ ಒಳಗೊಂಡಿದೆ.
ಇದನ್ನೂ ಓದಿ: ಭಾರತ ವಿರುದ್ಧ ಹೀಗೆ ಮಾಡಿ… 3ನೇ ಟೆಸ್ಟ್ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ಜೇಮ್ಸ್ ಆ್ಯಂಡರ್ಸನ್ ಮಹತ್ವದ ಸಲಹೆ! | IND vs ENG
ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಿದ್ಧಪಡಿಸಿದ ಪ್ರಾಥಮಿಕ ವರದಿಯನ್ನು ಜುಲೈ 8ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಕೇಂದ್ರದ ಆದೇಶದ ಬಳಿಕ ಅದರಲ್ಲಿರುವ ಮಾಹಿತಿ ಸಾರ್ವಜನಿಕರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).