ನ್ಯೂಸ್

ಗುರಿ ಜತೆಗೆ ಸಾಧಿಸುವ ಛಲ ಅಳವಡಿಸಿಕೊಳ್ಳಿ,

Kopala - Desk - Eraveni

ಅಳವಂಡಿ: ಯುವಶಕ್ತಿಗೆ ಯಾವುದು ಅಸಾದ್ಯ ಅಲ್ಲ, ನಿರ್ದಿಷ್ಟ ಗುರಿಯನ್ನು ಮುಟ್ಟಲು ಸಾಧಿಸುವ ಛಲ ಅಳವಡಿಸಿಕೊಳ್ಳಿ ಅಗಾಲೇ ಜೀವನದ ಗುರಿ ಮುಟ್ಟಲು ಸಾದ್ಯ ಎಂದು ಮುಂಡರಗಿ ಎಮ್.ಎಸ್.ಡಂಬಳ ಕಾಲೇಜಿನ ಪ್ರಾಚಾರ್ಯ ಈಶ್ವರ ಪೂಜಾರ ಹೇಳಿದರು.

ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ಎನ್‌ಎಸ್‌ಎಸ್ ಘಟಕ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ದೈನಂದಿನ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಧ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಮುನ್ನೆಡೆಯಬೇಕು. ಜೀವನದಲ್ಲಿ ಗೆಲ್ಲಲು ಧನಾತ್ಮಕ ಆಲೋಚನೆಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸಂಸ್ಕಾರ ಜೀವನದ ದಾರಿ ತೋರಿಸುತ್ತೆ.

ದೇಶಭಕ್ತಿ, ಸಾಮಾಜಿಕ ಸೇವೆ, ಒಗ್ಗಟ್ಟನ್ನು ಪುಟಿದೆಬ್ಬಿಸುವ ತಾಕತ್ತು ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಶಕ್ತಿ ಎನ್‌ಎಸ್‌ಎಸ್‌ನಲ್ಲಿದೆ ಕಾರಣ ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಸೇರಿ.

ಮೋಬೈಲ್ ನ್ನು ಸಂದರ್ಭಕ್ಕೆ ತಕ್ಕಂತೆ ಜಾಣ್ಮೆ ಬಳಸಿ ಮುನ್ನಡೆಯಬೇಕು ಹಾಗೂ ಮೋಬೈಲ್ ಬಳಕೆಯಲ್ಲಿ ಇತಿಮಿತಿ ಇರಲಿ ಅನಾವಶ್ಯಕವಾಗಿ ಬಳಸಬೇಡಿ ಎಂದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.