ನವದೆಹಲಿ: ಕೋವಿಡ್19 ವೈರಸ್ ಪಾಸಿಟಿವ್ ಬಂದು, ಮೆದು ಲಕ್ಷಣ ಹಾಗೂ ಲಕ್ಷಣರಹಿತ ಇರುವ ರೋಗಿಗಳಲ್ಲಿ ಕರೊನಾ ವೈರಸ್ 7 ರಿಂದ 8 ದಿನಗಳಲ್ಲಿ ಸಾಯುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಶುಕ್ರವಾರ ಹೇಳಿದ್ದಾರೆ.
ಈ ವೇಳೆಯಲ್ಲಿ ವೈರಸ್ ಬೇರೆಯವರಿಗೆ ಹರಡುವುದು ತುಂಬಾ ವಿರಳ. ಆದರೆ, ಮೃತ ಕರೊನಾ ಕಣಗಳು ಆರ್ಟಿ ಪಿಸಿಆರ್ ಟೆಸ್ಟ್ನಲ್ಲಿ ಪಾಸಿಟಿವ್ ಬರಬಹುದು ಎಂದು ಗುಲೇರಿಯಾ ಹೇಳಿದ್ದಾರೆ. ಕೋವಿಡ್ ಕಾಣಿಸಿಕೊಂಡು ಮೆದು ಹಾಗೂ ಲಕ್ಷಣರಹಿತ ರೋಗಿಗಳು ಹೋಮ್ ಐಸೋಲೇಷನ್ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಮತ್ತೆ ಶುಕ್ರವಾರ ಹೋಮ್ ಐಸೋಲೇಷನ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ ಕಾಣಿಸಿಕೊಂಡ ನಂತರ ಈ ಮೊದಲು ಹತ್ತು ದಿನ ಐಸೋಲೇಷನ್ ಇರಬೇಕು ಎಂದು ಮೊದಲು ಹೇಳಿತ್ತು. ಇದೀಗ ಮತ್ತೆ ರೋಗಿ ಹತ್ತು ದಿನ ಐಸೋಲೇಷನ್ನಲ್ಲಿ ಇರಬೇಕು ಎಂದು ಹೇಳಿದೆ.
ಭಾರತದಲ್ಲಿ ಶುಕ್ರವಾರ 3.87 ಲಕ್ಷ ಕರೊನಾ ಪ್ರಕರಣಗಳು ವರದಿಯಾಗಿದ್ದು, 3498 ಜನ ಮೃತಪಟ್ಟಿದ್ದಾರೆ.