ನ್ಯೂಸ್

ವಿಕಾಸ ದುಬೆಯ ಪ್ರಮುಖ ಸಹಾಯಕ ಚಿತ್ರಕೂಟದಲ್ಲಿ ಅರೆಸ್ಟ್​​​​....!

sspmiracle1982

ಲಖನೌ: ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ದರೋಡೆಕೋರ ವಿಕಾಸ್ ದುಬೆನ ಸಹಾಯಕನನ್ನು ಚಿತ್ರಕೂಟ ಜಿಲ್ಲೆಯಲ್ಲಿ ಬಂಧಿಸಿದೆ.

ಬಂಧಿತ ಸಹಾಯಕ ಬಾಲ್ ಗೋವಿಂದ್ ದುಬೆ ಅಲಿಯಾಸ್ ಲಾಲು, ಬಿಕ್ರು ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆಯ ಸಹಾಯಕನಾಗಿದ್ದಾನೆ ಎಂದು ಎಸ್‌ಟಿಎಫ್ ವಕ್ತಾರರು ಮಂಗಳವಾರ ತಿಳಿಸಿದ್ದಾರೆ. ‘

ಈತ ಬಿಕ್ರು ನಿವಾಸಿಯಾಗಿದ್ದು, ಸೋಮವಾರ ಚಿತ್ರಕೂಟದ ಕಾರ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪರಿಕ್ರಮ ತಿರುವಿನಿಂದ ಆತನನ್ನು ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಲಾಲು ತನ್ನ ಗುರುತನ್ನು ಮರೆಮಾಚಿ ಮತ್ತು ಮಾರುವೇಷದಲ್ಲಿದ್ದಾನೆ ಎಂಬ ಮಾಹಿತಿ ಇತ್ತು.

ಕಳೆದ ತಿಂಗಳು ಪೊಲೀಸರ ಗುಂಪಿನ ಮೇಲೆ ಹಲ್ಲೆ ನಡೆಸಿ, 8 ಪೊಲೀಸ್ ಸಿಬ್ಬಂದಿ ಹತ್ಯೆಗೆ ಕಾರಣವಾದ ವಿಕಾಸ್ ದುಬೆ ಗ್ಯಾಂಗ್‌ನಲ್ಲಿ ತಾನಿದ್ದುದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ.