ನ್ಯೂಸ್

ಎಐಸಿಟಿಇಯಿಂದ ಎಐ ಫ್ಯಾಕ್ಟರಿ: ದೇಶಾದ್ಯಂತ 50 ಲಕ್ಷ ವಿದ್ಯಾರ್ಥಿಗಳಿಗೆ ಎಐ ಕಲಿಕೆ

ಎನ್.ಎಲ್. ಶಿವಮಾದು

ಬೆಂಗಳೂರು: ಪ್ರತಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತನ್ನ ಪ್ರಾಬಲ್ಯಮೆರೆಯುತ್ತಿರುವ ಹೊತ್ತಿನಲ್ಲಿಯೇ ದೇಶದ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಎಐ ಫ್ಯಾಕ್ಟರಿಯನ್ನೇ ನಿರ್ಮಿಸುತ್ತಿದೆ.

ದೇಶಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್, ಬಿಸಿಎ, ಎಂಸಿಎ, ಪಾಲಿಟೆಕ್ನಿಕ್ ಸೇರಿ ತಾಂತ್ರಿಕ ಶಿಕ್ಷಣವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಫ್ಯಾಕ್ಟರಿ (ಎಐ ಲ್ಯಾಬ್) ಕಾರ್ಯನಿರ್ವಹಿಸಲಿದೆ.

50 ಲಕ್ಷ ವಿದ್ಯಾರ್ಥಿಗಳು, 50 ಸಾವಿರ ಶಿಕ್ಷಕರಿಗೆ ಅನುಕೂಲ

ದೇಶಾದ್ಯಂತ ಪ್ರತಿ ವರ್ಷ ಅಂದಾಜು 1.2 ಕೋಟಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ಪಡೆಯಲಿದ್ದಾರೆ. ಆದರೆ, ಈಗಾಗಲೇ ಆರ್ಥಿಕವಾಗಿ ಅನುಕೂಲವಾಗಿರುವ ಪ್ರತಿಷ್ಠಿತ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿ ಎಐ ಲ್ಯಾಬ್‌ಗಳನ್ನು ನಿರ್ಮಿಸಿ ಎಐ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಸರ್ಕಾರಿ, ಅನುದಾನಿತ ಮತ್ತು ಮಧ್ಯಮ ವರ್ಗದ ಖಾಸಗಿ ಕಾಲೇಜುಗಳಲ್ಲಿ ಎಐ ಲ್ಯಾಬ್ ನಿರ್ಮಿಸಲು ಸಾಧ್ಯವಾಗಿಲ್ಲ. ಇಂತಹ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎಐಸಿಟಿಇ ಲ್ಯಾಬ್ ಸದ್ಬಳಕೆಯಾಗಲಿದೆ. ಎಐಸಿಟಿಇ ಪ್ರಕಾರ, ವಾರ್ಷಿಕ ಅಂದಾಜು 50 ಲಕ್ಷ ವಿದ್ಯಾರ್ಥಿಗಳು ಮತ್ತು 50 ಸಾವಿರ ಪ್ರಾಧ್ಯಾಪಕರಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ.

ಐಬಿಎಂ 20 ಕೋಟಿ ರೂ. ಸಿಎಸ್‌ಆರ್ ನಿಧಿ:

ಎಐ ಲ್ಯಾಬ್ ನಿರ್ಮಿಸುವ ಸಂಬಂಧ ಎಐಸಿಇಟಿಇ ಐಬಿಎಂ, ಗೂಗಲ್, ಮೈಕ್ರೋಸ್‌ಟಾ, ಟಿಸಿಎಸ್ ಸೇರಿ ಹಲವು ಸಂಸ್ಥೆಗಳೊಂದಿಗೆ ಒಡಂಬಿಡಕೆ ಮಾಡಿಕೊಂಡಿದೆ. ಸದ್ಯ ಐಬಿಎಂ ಎಐ ಲ್ಯಾಬ್‌ಗಾಗಿ 20 ಕೋಟಿ ರೂ. ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್)ಯನ್ನು ನೀಡುತ್ತಿದೆ. ಈ ಸಂಬಂಧ ಮುಂದಿನ ವಾರ ಒಡಂಬಡಿಕೆ ವಿನಿಮಯ ಮಾಡಿಕೊಳ್ಳಲಿದೆ ಎಂದು ಎಐಸಿಟಿಇ ಮೂಲಗಳು ತಿಳಿಸಿವೆ.

ಪ್ರೊ.ವೇಣುಗೋಪಾಲ್ ನೇತೃತ್ವದ ಸಮಿತಿ ರಚನೆ

ಎಐ ಲ್ಯಾಬ್ ವಿನ್ಯಾಸಗೊಳಿಸುವುದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಲ್ಯಾಬ್ ಹೇಗಿರಬೇಕೆಂದು ಸಮಿತಿಯು ತನ್ನ ಶಿಾರಸುಗಳನ್ನು ನೀಡಿದೆ.

ಜಾಗತಿಕವಾಗಿ ಎಐ ಕೈಗಾರಿಕೆಗಳಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸುವ, ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ನಾವೀನ್ಯತೆ ವಿಧಾನಗಳನ್ನು ಮರು ರೂಪಿಸುವುದಕ್ಕಾಗಿ ಎಐ ಲ್ಯಾಬ್ ಅವಶ್ಯವಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು ಪರಿವರ್ತನಾ ಯುಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಎಐ ಸಂಯೋಜಿಸಿ ಪ್ರಾಯೋಗಿಕವಾಗಿ ವಿಶ್ವವಿದ್ಯಾಲಯಗಳು ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕತೆಗೆ ಅಭುತಪೂರ್ವ ಅವಕಾಶಗಳನ್ನು ತೆರೆದುಕೊಳ್ಳಬಹುದಾಗಿದೆ. ಜ್ಞಾನ ಮತ್ತು ಪ್ರಾಯೋಗಿಕ ಕೌಶಗಳೊಂದಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಅನುಕೂಲವಾಗುವ ಶಿಾರಸುಗಳನ್ನು ನೀಡಲಾಗಿದೆ.

ವಿವಿಧ 15 ಕಾರ್ಪೋರೇಟ್ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿ ಸಮಿತಿಯು ಎಐಸಿಟಿಇಗೆ ಶಿಾರಸುಗಳನ್ನು ನೀಡಿದೆ.

ಲ್ಯಾಬ್ ವಿನ್ಯಾಸಕ್ಕೆ ಸಮಿತಿ ಶಿಫಾರಸುಗಳೇನು?

- ತರಬೇತಿಯಲ್ಲಿ ಪ್ರಮಾಣೀಕೃತ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಅಧ್ಯಾಪಕರಿಗೆ ಪ್ರವೇಶಿಸಲು ಅವಕಾಶ ಕಲ್ಪಿಸುವುದು

- ಕೇಂದ್ರೀಕೃತ ಮತ್ತು ಪ್ರಾದೇಶಿಕ ಸೆಟಪ್‌ಗಳೊಂದಿಗೆ ಸೂಕ್ತ ಎಐ ತರಬೇತಿ ಮೂಲಸೌಕರ್ಯ ವಿನ್ಯಾಸಗೊಳಿಸುವುದು

- ಕ್ಲೌಡ್ ಆಧಾರಿತ ಎಐ ಪರಿಹಾರಗಳನ್ನು ಬಳಸುವುದು. ಇದಕ್ಕಾಗಿ ತಂತ್ರಜ್ಞಾನ ಕಂಪನಿಗಳು ಮತ್ತು ಕೈಗಾರಿಕಾ ಸಂಸ್ಥೆಗೊಂದಿಗೆ ತೊಡಗಿಸಿಕೊಳ್ಳುವುದು. ಅಧ್ಯಾಪಕರಿಗೆ ಕ್ಯಾಟಲಾಗ್ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರಚಿಸುವುದು.

- ಎಐ ಆಧಾರಿತ ಯೋಜನೆಗಳನ್ನು ಸಿದ್ಧಪಡಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಪ್ರೋತ್ಸಾಹಿಸುವುದು.

- ಎಐ ಪರಿವರ್ತನೆಗಾಗಿ ವಿವಿಧ ದೃಷ್ಟಿಕೋನಗಳು ಮತ್ತು ಪರಿಗಣನೆಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ತಂತ್ರಜ್ಞಾನ ಪಾಲುದಾರರು ಮತ್ತು ಉದ್ಯಮ ತಜ್ಞರನ್ನು ಬಳಸಿಕೊಂಡು ಸಹ ಬೋಧನಾ ಮಾದರಿಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದೆ.

- ವರ್ಷಪೂರ್ತಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ ಎಐ ಮನೋಭಾವವನ್ನು ಬೆಳೆಸಲು ಹ್ಯಾಕಥಾನ್‌ಗಳನ್ನು ಆಯೋಜಿಸಲು ಸೂಕ್ತ ಕಂಪನಿಗಳನ್ನು ಗುರುತಿಸಬೇಕು.

ಪ್ರಾದೇಶಿಕವಾರು ಲ್ಯಾಬ್‌ಗಳ ರಚನೆ

ಪ್ರಸ್ತುತ ಎಐಸಿಟಿಇ ದೆಹಲಿ ಕಚೇರಿ ಆವರಣದಲ್ಲಿ ಲ್ಯಾಬ್ ರಚನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕವಾಗಿ ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪಶ್ಚಿಮ ಬಂಗಾಳದಲ್ಲಿ ವಲಯವಾರು ಲ್ಯಾಬ್‌ಗಳನ್ನು ರಚಿಸುವ ಉದ್ದೇಶ ಹೊಂದಲಾಗಿದೆ. ಸಿಎಸ್‌ಆರ್ ನಿಧಿ ಲಭ್ಯವಾಗುವ ಆಧಾರದಲ್ಲಿ ಮುಂದಿನ ಯೋಜನೆಗಳು ಕಾರ್ಯಗತವಾಗಲಿವೆ.

ವಿದ್ಯಾರ್ಥಿಗಳಿಗೆ ಲ್ಯಾಬ್ ಹೇಗೆ ಸಹಕಾರಿ?

ದೆಹಲಿಯಲ್ಲಿ ಲ್ಯಾಬ್ ರಚಿಸಿದ ಮಾತ್ರಕ್ಕೆ ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲವಾಗಲಿದೆ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ, ಆೃಪ್‌ಗಳ ಮೂಲಕ ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ಪೂರೈಸಲಿದೆ.

ಎಐ ಫ್ಯಾಕ್ಟರಿ ಹೇಗಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಎಐ ಶಿಕ್ಷಣ ನೀಡಬೇಕು ಎಂಬುದನ್ನು ಗುರಿಯಾಗಿಸಿಕೊಂಡು ಸಮಿತಿಯು ಎಐಸಿಟಿಇಗೆ ಶಿಾರಸು ಮಾಡಲಾಗಿದೆ. ಎಐ ಕಲಿಕೆ, ಉದ್ಯೋಗ, ಉದ್ಯಮ ನಿರ್ಮಿಸುವ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ. - ಪ್ರೊ.ಕೆ.ಆರ್. ವೇಣುಗೋಪಾಲ್, ಎಐ ಶಿಾರಸು ಸಮಿತಿ ಅಧ್ಯಕ್ಷ