ನ್ಯೂಸ್

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಐ ಕಾರ್ಡ್ ಅಗತ್ಯ: ಯತಿಕಾರ್ಪ್ ಇಂಡಿಯಾ,ಇನ್ ಮೀಡಿಯ ನೆಟವರ್ಕ್ ಸಂಸ್ಥೆಗಳಿಂದ ಹೊಸ ಆವಿಷ್ಕಾರ

ಬೆಂಗಳೂರು: ತಂತ್ರಜ್ಞಾನ ಜಗತ್ತು ಅತೀ ವೇಗವಾಗಿ ಬೆಳೆಯುತ್ತಿದ್ದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ತಕ್ಕಂತೆ ಈಗಿನ ವಿದ್ಯಾರ್ಥಿಗಳು ಪ್ರಸ್ತುತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಯತಿಕಾರ್ಪ್ ಇಂಡಿಯಾ ಮತ್ತು ಇನ್ ಮೀಡಿಯಾ ನೆಟ್‌ವರ್ಕ್ ಸಂಸ್ಥೆಗಳ ಸಹಯೋಗದಲ್ಲಿ ಎ.ಐ ಕಾರ್ಡ್ ಆ್ಯಪ್ ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಎಂ.ಡಿ ಶಿವಕುಮಾರ್ ಹಾಗೂ ಸಿಇಒ ಯತೀಶಾ ತಿಳಿಸಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸೂಕ್ತ ತಂತ್ರಜ್ಞಾನ ಬಳಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಎದುರಿಸಬೇಕಾಗಬಹುದು. ಹೀಗಾಗಿ ಎಐ ತಂತ್ರಜ್ಞಾನವನ್ನು ಪ್ರಾಥಮಿಕ, ಹೈಸ್ಕೂಲ್, ಪಿಯು, ಪದವಿ, ಇಂಜಿನಿಯರಿಂಗ್ , ಮೆಡಿಕಲ್ ಹೀಗೆ ಎಲ್ಲಾ ಕ್ಷೇತ್ರದ ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲೇ ಬಳಸಿಕೊಂಡು ನೈಪುಣ್ಯತೆಯನ್ನು ಪಡೆಯುವುದು ಅನಿವಾರ್ಯವಾಗಿದೆ. ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಏನಿದು ಎಐ ಕಾರ್ಡ್ ?

ಎಐ ಕಾರ್ಡ್ ಪ್ರತಿ ವಿದ್ಯಾರ್ಥಿಯ ಕಲಿಕೆಯ ವೇಗ ಮತ್ತು ಶೈಲಿಗೆ ಅನುಗುಣವಾಗಿ ಕಲಿಕೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಕಲಿಕೆಯನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುತ್ತದೆ. ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ದಿನನಿತ್ಯದ ಬದುಕಿನಲ್ಲಿ ಸೃಜನಶೀಲ ಚಿಂತನೆಗೆ ಈ ಎಐ ಕಾರ್ಡ್ ಸಹಾಯಕವಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತರಬೇತಿ ಲಭ್ಯವಿದ್ದು ಆನ್‌ಲೈನ್ ಮೂಲಕ ಪಡೆಯಬಹುದು ಎಂದು ಹೇಳಿದರು.

3 ವಿಶೇಷ ರೀತಿಯ ಎಐ ಕಾರ್ಡ್

ವಿದ್ಯಾರ್ಥಿಗಳು ಮತ್ತು ಪೋಷಕರ ಅಗತ್ಯಕ್ಕೆ ತಕ್ಕಂತೆ ವಿಶೇಷ ರೀತಿಯಲ್ಲಿ ಪ್ರತ್ಯೇಕ ಮಾದರಿಯ ಎಐ ಕಾರ್ಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ್ಚಟಞಛಿಠಿಛಿ ್ಚಚ್ಟ ಪ್ರಾಥಮಿಕ, ಹೈಸ್ಕೂಲ್, ಪಿಯು, ಪದವಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇತರೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಠ್ಠಿಛ್ಞಿಠಿ ್ಚಚ್ಟ

6ನೇ ತರಗತಿಯೊಳಗಿನ ವಿದ್ಯಾರ್ಥಿಗಳ ಪೋಷಕರಿಗೆ ಚ್ಟಛ್ಞಿಠಿ ್ಚಚ್ಟಈ ರೀತಿಯ 3 ಬಗೆಯ ಕಾರ್ಡ್‌ಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಎಐ ಶಿಕ್ಷಕ : ಎಐ ಪ್ರೇರಿತ ಈ-ಲರ್ನಿಂಗ್

ಸಂಸ್ಥೆ ವತಿಯಿಂದ ಎಐ ಕಾರ್ಡ್ ಹೊಂದಿದ ಪ್ರತಿ ವಿದ್ಯಾರ್ಥಿಗೂ ಹತ್ತು ದಿನಗಳ ತರಬೇತಿ ಹಾಗೂ ಎಐ ಶಿಕ್ಷಕ ಎಂಬ ಎಐ ಪ್ರೇರಿತ ಈ-ಲರ್ನಿಂಗ್ ಪ್ಲಾಟ್‌ಫಾರ್ಮ್ ಸೀಮಿತ ಅವಧಿಗೆ ಉಚಿತವಾಗಿ ಸಿಗಲಿದ್ದು,ವಿದ್ಯಾರ್ಥಿಗಳಿಗೆ ಶಾಲಾ ಹಂತದಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಮಾರ್ಗದರ್ಶನವನ್ನು ನೀಡುತ್ತದೆ. ಈ ಪ್ಲಾಟ್‌ಫಾರ್ಮ್ ವಿದ್ಯಾರ್ಥಿಗಳಿಗೆ ಪಠ್ಯ, ಪ್ರಶ್ನೆ ಪತ್ರಿಕೆಗಳು, ನೋಟ್ಸ್ ಮತ್ತು ಪಠ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಸಿದ್ಧಪಡಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಗೆ ಮತ್ತು ಪಠ್ಯವನ್ನು ಸರಿಯಾಗಿ ಅರ್ಥೈಸಲು ಸಹಾಯಕವಾಗಿದು, ಈ ವೇದಿಕೆಯು ವಿದ್ಯಾರ್ಥಿಗಳ ಕಲಿಕೆಯನ್ನು ಸರಳಗೊಳಿಸುತ್ತದೆ ಎಂದರು.

ಸ್ಕಾಲರ್‌ಶಿಪ್ ಪಡೆಯಲು ಅವಕಾಶ

ತರಬೇತಿ ಪೂರ್ಣಗೊಳಿಸಿದ ಬಳಿಕ ಶೈಕ್ಷಣಿಕ ಮಟ್ಟಕ್ಕೆ ಅನುಗುಣವಾಗಿ ಸ್ಕಾಲರ್‌ಶಿಪ್ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜೀನಿಯಸ್‌ನಿಂದ ರೂ. 50,000 ರವರೆಗೆ ಸ್ಕಾಲರ್ ಶಿಪ್,ಪಿಯುಸಿ ಪದವಿ ವಿದ್ಯಾರ್ಥಿಗಳಿಗೆ ವಿಕ್ರಮ್ ಸಾರಾಭಾಯ್ ಎಕ್ಸಲೆನ್ಸ್‌ನಿಂದ ರೂ. 75,000,ಸ್ನಾತಕೋತ್ತರ, ಇಂಜಿನಿಯರಿಂಗ್, ಎಂಬಿಬಿಎಸ್ ಇತರೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಸಿ.ವಿ.ರಾಮನ್ ವಿಶನರಿಯಿಂದ . ರೂ.75,000ಗಳಷ್ಟು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಚಾಣಕ್ಯ ದ ಬ್ರಿಲಿಯೆನ್ಸ್‌ನಡಿ ರೂ. 1,00,000. ಮೊತ್ತದ ಸ್ಕಾಲರ್ಶಿಪ್ ಆಯ್ದ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಇದರೊಂದಿಗೆ ತರಬೇತಿ ಪೂರ್ಣಗೊಳಿಸಿದ ಎಲ್ಲ ಅಭ್ಯರ್ಥಿಗಳಿಗೂ ’ಎಐ ಕಾಂಪಿಟೆನ್ಸಿ ಸರ್ಟಿಫಿಕೇಟ್ ಸಹ ದೊರೆಯಲಿದೆ ಎಂದು ವಿವರಿಸಿದರು.

ವಾಟ್ಸಾಪ್ ಮೂಲಕ ಸರಳ ನೋಂದಣಿಗೆ ಅವಕಾಶ

ಎಐ ಕಾರ್ಡ್ ನೋಂದಾಯಿಸಲು ವಾಟ್ಸಾಪ್ ಸಂಖ್ಯೆ 9535440195 ಅಥವಾ ( ಠಿಠಿ://ಡಿಞಛಿ.ಟ್ಟಟ/1ಜ್ಜಿಜ್ಝಿಛಿ ) ವಾಟ್ಸಪ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಸ್ನಾತಕೋತ್ತರ, ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೂ ಉಪಯುಕ್ತವಾಗಲಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಂಸ್ಥೆ ವತಿಯಿಂದ ಒಂದು ಎಐ ಕಾರ್ಡ್‌ನ್ನು ರಿಯಾಯಿತಿ ದರ 499ರೂ ನಿಗದಿಪಡಿಸಲಾಗಿದೆ.ನೋಂದಣಿ ಪೂರ್ಣಗೊಂಡ ಬಳಿಕ ಎಐ ಕಾರ್ಡ್ ಕೊರಿಯರ್ ಮೂಲಕ ನಿಮ್ಮ ವಿಳಾಸಕ್ಕೆ ಬರಲಿದೆ ಆಸಕ್ತರು ಅ.31ರೊಳಗೆ ನೋಂದಣಿ ಮಾಡಿಕೊಳ್ಳುವುದು ಎಂದರು.