ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ನಟ ರಾಮ್ ಪೋತಿನೇನಿ ಮತ್ತು ಸ್ಯಾಂಡಲ್ವುಡ್ ಬೆಡಗಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಅಭಿನಯದ ಬಹುನಿರೀಕ್ಷಿತ 'ಸ್ಕಂದ' ಸಿನಿಮಾದ ಬಿಡುಗಡೆಗೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಈ ಮಧ್ಯೆ ತಮ್ಮ ನೆಚ್ಚಿನ ಬಾಲಿವುಡ್ ಹೀರೋ ಬಗ್ಗೆ ರಾಮ್ ಮನಬಿಚ್ಚಿ ಮಾತನಾಡಿದ್ದಾರೆ.
ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಪೋತಿನೇನಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಆಕ್ಷನ್-ಡ್ರಾಮಾ ಸಿನಿಮಾ ಇದೇ ಸೆಪ್ಟೆಂಬರ್ 28, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿರುವ ರಾಮ್, ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಬಾಲಿವುಡ್ ನಟನ ಹೆಸರನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ ರಾಮ್, "ಪ್ರಸ್ತುತ ಪೀಳಿಗೆಯಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನನಗೆ ರಣಬೀರ್ ಕಪೂರ್ ತುಂಬ ಇಷ್ಟವಾಗುತ್ತಾರೆ. ಮುಂದಿನ ದಿನಗಳಲ್ಲಿ ಅವಕಾಶ ಲಭಿಸಿದರೆ, ಖಂಡಿತವಾಗಿ ಅವರೊಂದಿಗೆ ನಟಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಹಾಲು ಉತ್ಪಾದಕರ ಸಂಘಕ್ಕೆ ಉತ್ತಮ ಲಾಭ
ಚಿತ್ರದಲ್ಲಿ ಸಾಯಿ ಮಂಜ್ರೇಕರ್, ಪ್ರಿನ್ಸ್ ಸೆಸಿಲ್, ಊರ್ವಶಿ ರೌಟೇಲಾ, ರಾಜ, ಶರತ್ ಲೋಹಿತಾಶ್ವ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಎಸ್. ಥಮನ್ ಅವರು ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).