BC Patil 
ನ್ಯೂಸ್

ಕೃಷಿ ಸಚಿವ ಬಿ.ಸಿ.ಪಾಟೀಲ್​ಗೆ ಕರೊನಾ ಭೀತಿ; ಇಡೀ ಕುಟುಂಬ ಕ್ವಾರಂಟೈನ್​

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರಿಗೆ ಕರೊನಾ ಭೀತಿ ಎದುರಾಗಿದ್ದು, ಅವರು ಇಂದಿನಿಂದಲೇ ಸ್ವಯಂ ಕ್ವಾರಂಟೈನ್​ ಆಗಿದ್ದಾರೆ.

ಬಿ.ಸಿ.ಪಾಟೀಲ್​ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರಿನ ಮಿನಿಸ್ಟರ್​ ಕ್ವಾಟರ್ಸ್​​ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ನಾನೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಹಾಗಾಗಿ ನಾನು ಮತ್ತು ನನ್ನ ಕುಟುಂಬಸ್ಥರು, ಸಿಬ್ಬಂದಿ ವರ್ಗದವರು ಒಂದು ವಾರಗಳ ಕಾಲ ಕ್ವಾರಂಟೈನ್​ ಆಗುತ್ತಿದ್ದೇವೆ. ಏನಾದರೂ ಅಗತ್ಯವಿದ್ದರೆ 9448467366ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

ಜನಪ್ರತಿನಿಧಿಗಳನ್ನು ಕರೊನಾ ಬೆಂಬಿಡದೆ ಕಾಡುತ್ತಿದೆ. ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿಯವರಲ್ಲಿ ಮೊನ್ನೆಯಷ್ಟೇ ಕರೊನಾ ದೃಢಪಟ್ಟಿದ್ದು, ಅವರೂ ಸಹ ತಮ್ಮ ಫಾರ್ಮ್​ ಹೌಸ್​​ನಲ್ಲಿ ಸೆಲ್ಫ್​ ಕ್ವಾರಂಟೈನ್​​ನಲ್ಲಿದ್ದಾರೆ.