ನ್ಯೂಸ್

ಇಸ್ರೇಲ್ ಪ್ರತಿನಿಧಿಗಳೊಂದಿಗೆ ಕೃಷಿ ಸಚಿವರ ಚರ್ಚೆ

ಬೆಂಗಳೂರು:
ಇಸ್ರೇಲ್ ದೇಶದ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಕೃಷಿಯಲ್ಲಿ ಹೊಸ ಸಂಭಾವ್ಯ ಸುಧಾರಣೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಹವಾಮಾನ ಬದಲಾವಣೆ ,ನೀರಿನ ಮಿತ ಬಳಕೆ, ವೈಜ್ಞಾನಿಕ ಕೃಷಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು, ರಾಜ್ಯದ ಕೃಷಿ ಪದ್ದತಿಯಲ್ಲಿ ಪರಿಣಾಕಾರಿ ಹಾಗೂ ಗುಣಾತ್ಮಕ ಬದಲಾವಣೆಗೆ ಸಲಹೆ, ಸಹಕಾರ ನೀಡುವಂತೆ ಕೋರಿದರು..
ಇಸ್ರೇಲ್ ನ ಕೃಷಿ ಸಂಸ್ಕೃತಿ, ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕೃಷಿ ಇಲಾಖೆ ,ವಿಶ್ವವಿದ್ಯಾಲಯಗಳ ಪಾತ್ರದ ಬಗ್ಗೆ ಮಾಹಿತಿ ಪಡೆದ ಸಚಿವರು, ರಾಜ್ಯದಲ್ಲಿನ ಪರಿಸ್ಥಿತಿ, ನಡೆಸಲಾಗುತ್ತಿರುವ ನಿರಂತರ ಸಂಶೋಧನೆಗಳು ಕೃಷಿ ಭೂಮಿಗೆ ಅದರ ವರ್ಗಾವಣೆ, ಸರ್ಕಾರದ ಯೋಜನೆ, ಪ್ರೋತ್ಸಾಹ ಕ್ರಮಗಳು, ನೀರಿನ ಸಂಸ್ಕರಣೆ, ಮರು ಬಳಕೆ, ರೈತ ತರಬೇತಿ ಕಾರ್ಯಕ್ರಮಗಳು ತಂತ್ರಜ್ಞಾನಗಳ ವರ್ಗಾವಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ರೇಲ್ ದೇಶದ ಡೆಪ್ಯೂಟಿ ಕಾನ್ಸಲೇಟ್ ಜನರಲ್ ಲೈಮೋರ್ ಬ್ಲೆಟರ್, ಇಸ್ರೇಲ್ ನಲ್ಲಿರುವ ಖಔಉಈ ಈಅಅ ಅಘೆಉಔ ಕಂಪನಿಯ ಕೋ ಫೌಂಡರ್, ಡಾನ ಪೌಷ್ಟಿ, ಹಾಗೂ ಇಖ, ಇಔಐಅಉ ಇ್ಕ ಕಂಪನಿಯ ಕೋ ಫೌಂಡರ್ ವಿವೇಕಾನಂದ ತಿವಾರಿ, ಇಸ್ರೇಲ್ ದೇಶದ ಕಾನ್ಸಲೇಟ್ ಸಿಬ್ಬಂದಿ ರೇಷ್ಮ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಅಪರ ನಿರ್ದೇಶಕ ರೆಡ್ಡಿ, ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.