ಅಗರಿ ಹಬ್ಬ ಹಬ್ಬಗಳ ಉತ್ಸವದ ಮೂಡುಬಿದಿರೆ ಶಾಖೆಯಲ್ಲಿ 10ನೇ ಹಂತ 1ನೇ ಡ್ರಾ ಕಾರ್ಯಕ್ರಮ ಆಯೋಜಿಸಲಾಯಿತು. ಮೀನು ವ್ಯಾಪಾರಿ ಇಶಾಕ್, ಉದ್ಯಮಿ ಸುರೇಂದ್ರ, ಅಶೋಕ್ ಪೂಜಾರಿ ಇರುವೈಲ್, ಮುಂಬೈ ಉದ್ಯಮಿ ಸುಂದರ್ ಎಂ.ಪೂಜಾರಿ ಉಪಸ್ಥಿತರಿದ್ದರು.  
ನ್ಯೂಸ್

ಅಗರಿ ಹಬ್ಬ ಹಬ್ಬಗಳ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ಮೂಡುಬಿದಿರೆ ಶಾಖೆಯಲ್ಲಿ 10ನೇ ಹಂತದ 1ನೇ ಡ್ರಾ
  • ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಅಗರಿ ಎಂಟರ್‌ಪ್ರೈಸಸ್ ಆಯೋಜಿಸಿದ್ದ ಹಬ್ಬ ಹಬ್ಬಗಳ ಉತ್ಸವದ 10ನೇ ಹಂತದ 1ನೇ ಡ್ರಾ ಮೂಡುಬಿದಿರೆ ಪ್ರೆಸ್ಟೀಜ್ ಟವರ್ ಶಾಖೆಯಲ್ಲಿ ಭಾನುವಾರ ನಡೆಯಿತು.
100 ದಿನ 100 ಬಹುಮಾನಗಳ ಸರಣಿಯ ಭಾಗವಾಗಿ ಆಯೋಜಿಸಲಾಗಿದ್ದ ಲಕ್ಕಿ ಡ್ರಾದಲ್ಲಿ ಹಲವಾರು ಅದೃಷ್ಟಶಾಲಿ ಗ್ರಾಹಕರು ಬಹುಮಾನ ಗೆದ್ದುಕೊಂಡರು. ಗುರುವಾಯನಕೆರೆ ವಿದ್ವತ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಸುಭಾಷ್‌ಚಂದ್ರ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ, ಮೂಡುಬಿದಿರೆ ಮಿಡ್ ಟೌನ್ ರೋಟರಿ ಕ್ಲಬ್‌ನ ಪ್ರಶಾಂತ್ ಕೆ.ಭಂಡಾರಿ, ಸುರತ್ಕಲ್‌ಎಂಆರ್‌ಪಿಎಲ್ ಕಂಪನಿ ಉದ್ಯೋಗಿ ಅಭಿಷೇಕ್ ಶೆಟ್ಟಿ ಐಕಳ ಪಾಲ್ಗೊಂಡಿದ್ದರು.
ಮೀನು ವ್ಯಾಪಾರಿ ಇಶಾಕ್, ಉದ್ಯಮಿ ಸುರೇಂದ್ರ, ಅಶೋಕ್ ಪೂಜಾರಿ ಇರುವೈಲ್, ಮುಂಬೈ ಉದ್ಯಮಿ ಸುಂದರ್ ಎಂ.ಪೂಜಾರಿ ಉಪಸ್ಥಿತರಿದ್ದರು. ಮೆಟಾಸ್‌ಟಾನ ಸರಿತಾ ಪ್ರವೀಣ್, ಬಿಲ್ಡೆಕ್ಸ್ ಸ್ಟೀಲ್ಸ್‌ನ ಸುನೀಲ್ ಶೆಟ್ಟಿ, ಇಮಿಟೇಶನ್ ಜುವೆಲ್ಲರಿ ಡಿಸೈನರ್ ಶಾರ್ಲಿನ್ ಗೋವ್ಸ್ ಶೆರಿನ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶೀನ ಮಾಸ್ತಿಕಟ್ಟೆ ಮುಖ್ಯ ಅತಿಥಿಗಳಾಗಿದ್ದರು. ಅಗರಿ ಸಂಸ್ಥೆ ಮಾಲೀಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ಅಗರಿ ಹಬ್ಬ ಹಬ್ಬಗಳ ಉತ್ಸವದ ಲಕ್ಕಿ ಡ್ರಾ ವಿಜೇತರಾದ ಅಬ್ದುಲ್ ಖಾಲಿಕ್ ಕಿಲ್ಪಾಡಿ, ನವೀನ್ ಉಲಿಯ ಅಲಂಗಾರು, ಹರ್ಷಿತ್ ಕಿನ್ನಿಗೋಳಿ, ಶಿರಿನ್ ಬಾನು ಬೆಳುವಾಯಿ, ಲೋಕೇಶ್ ಮಿಜಾರ್, ಸಂತೋಷ್ ಕಾಶಿಪಟ್ನ, ಬಶೀರ್ ಪ್ರಾಂತ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಮೂಡುಬಿದಿರೆ ಶಾಖೆ ಸಂಚಾಲಕ ಅಗರಿ ವಾದಿರಾಜ್ ರಾವ್, ಮ್ಯಾನೇಜರ್ ಸುನೀಲ್, ಸಿಬ್ಬಂದಿ ಉಪಸ್ಥಿತರಿದ್ದರು.