ಶಹರಾನ್ಪುರ: ಶುಕ್ರವಾರ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿದ್ದ ಗಲಭೆಕೋರರನ್ನು ಗುರಿತಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಒಂದು ಹೆಜ್ಜೆ ಮುಂದೆ ಹೋಗಿ ಗಲಭೆಕೋರರ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಲಭೆಯಲ್ಲಿ ಭಾಗಿಯಾಗಿದ್ದವರನ್ನು ಹಾಗೂ ಅವರ ಮನೆಯ ವಿಳಾಸವನ್ನು ಪತ್ತೆ ಹಚ್ಚಿದ ಪೊಲೀಸರು ಎರಡು ನಗರಗಳಲ್ಲಿನ ಕೆಲ ಗಲಭೆಕೋರರ ಮನೆಗಳನ್ನು ಜೆಸಿಬಿ ತಂದು ಉರುಳಿಸಿದೆ. ಈ ಮೂಲಕ ಹಿಂಸಾಚಾರಕ್ಕೆ ಕಾರಣರಾದವರಿಗೆ ಈ ರೀತಿ ಪಾಠ ಕಲಿಸುತ್ತಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸಿ, ಶುಕ್ರವಾರ ಕೈಗೊಂಡಿದ್ದ ಪ್ರತಿಭಟನೆ ನೋಡ ನೋಡುತ್ತಿದ್ದಂತೆ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರನ್ನು ಬಿಡದೇ ಕಲ್ಲು ತೂರಾಟ ನಡೆಸಲಾಗಿತ್ತು. ಇದೀಗ ಹತೋಟಿಗೆ ಬಂದಿದ್ದು, ಇಲ್ಲಿನ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಈ ಪೈಕಿ 68 ಮಂದಿಯನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೇ ಪ್ರಮುಖವಾಗಿರಿಸಿಕೊಂಡಿರುವ ಪೊಲೀಸರು ಒಬ್ಬೊಬ್ಬರಿಗೆ ಪಾಠ ಕಲಿಸುತ್ತಿದ್ದಾರೆ. (ಏಜೆನ್ಸೀಸ್)