ನ್ಯೂಸ್

2 ಕೆಜಿ ನಿಂಬೆಹಣ್ಣು, 3 ಕೆಜಿ ಜೇನುತುಪ್ಪ ತಿಂದೆ..ತೂಕ ಮಾತ್ರ ಕಡಿಮೆಯಾಗಲಿಲ್ಲ! ತೂಕ ಇಳಿಕೆಗೆ ಟಿಪ್ಸ್​ ಕೊಡುವವರಿಗೆ ಉತ್ತರ ಕೊಟ್ಟ ಉದ್ಯಮಿ..weight loss hype

weight loss hype:  ಇತ್ತೀಚಿನ ದಿನಗಳಲ್ಲಿ, ತೂಕ ಇಳಿಸಿಕೊಳ್ಳಲು  ಕೆಲವರು ಟಿಪ್ಸ್​​ ನೀಡುತ್ತಿರುತ್ತಾರೆ. ತೂಕ ಇಳಿಸಿಕೊಳ್ಳಲು, ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದೊಂದಿಗೆ ನಿಂಬೆ ನೀರನ್ನು ಕುಡಿಯಿರಿ ಎಂದು ಹಲವರು ಡಯೆಟ್​ ಪ್ಲ್ಯಾನ್​​ ಹೇಳುತ್ತಾರೆ.  ಈ ಕುರಿತಾಗಿ ಉದ್ಯಮಿಯೊಬ್ಬರು 'ವ್ಯಂಗ್ಯ' ಟ್ವೀಟ್ ಮಾಡಿದ್ದಾರೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ತೂಕ ಇಳಿಸಿಕೊಳ್ಳಲು ನಿಂಬೆ ಮತ್ತು ಜೇನುತುಪ್ಪದ ನೀರು ಕುಡಿಯುವುದರ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಹರ್ಷ್ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ, "ಎರಡು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ಕುಡಿದರೆ 2 ಕೆಜಿ ತೂಕ ಕಡಿಮೆಯಾಗುತ್ತದೆ ಎಂದು ನನಗೆ ಹೇಳಲಾಯಿತು, ಎರಡು ತಿಂಗಳ ನಂತರ, ನಾನು 2 ಕೆಜಿ ನಿಂಬೆಹಣ್ಣು ಮತ್ತು 3 ಕೆಜಿ ಜೇನುತುಪ್ಪವನ್ನು ಮಾತ್ರ ಖಾಲಿ ಮಾಡಿದೆ.... ನಾನು ಕಳೆದುಕೊಂಡಿದ್ದು ತೂಕವಲ್ಲ...ನಿಂಬೆಹಣ್ಣು ಮತ್ತು  ಜೇನುತುಪ್ಪ ಅಷ್ಟೇ...  ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು...  ನೀವೆ ಲಕ್ಕಿ ಸರ್​...ಅದು ಆದ್ರೂ ಕಳೆದುಕೊಂಡ್ರಲ್ಲ...ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ತೂಕ ಇಳಿಕೆಯ ಬಗ್ಗೆ ಜನರು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಿಂಬೆ ನೀರು ತೂಕ ಇಳಿಸಿಕೊಳ್ಳಲು ಕಾರಣವಾಗುವುದಿಲ್ಲ ಎಂದು ಹೇಳುತ್ತಾರೆ, ಆದರೆ ಕೆಲವು ಬಳಕೆದಾರರು ಇದರ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.