ನ್ಯೂಸ್

ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿದ ಪತಿ..!

ಕಿಲಾ: ಮದುವೆಯಾದ 20 ದಿನಗಳ ನಂತರ ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿರುವ ವಿಚಿತ್ರ ಘಟನೆ ಝಾರ್ಖಂಡ್‌ನ ಪಲಮು ಜಿಲ್ಲೆಯ ಕಿಲಾ ಗ್ರಾಮದಲ್ಲಿ ನಡೆದಿದೆ.

ಮೇ 10ರಂದು ಕಿಲಾ ಗ್ರಾಮದ ಸನೋಜ್​ ಕುಮಾರ್​, ಪ್ರಿಯಾಂಕಾ ಎಂಬಾಕೆಯ ಜತೆ ಮದುವೆಯಾಗಿದ್ದ. ಆದರೆ ಪ್ರಿಯಾಂಕಾ ಅದೇ ಗ್ರಾಮದ ಜೀತೆಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಮದುವೆಯ ನಂತರವೂ ಆಕೆ ಅವನ ಜತೆ ಫೋನ್​ನಲ್ಲಿ ಮಾತನಾಡುತ್ತಿದ್ದಳು.

ಈ ನಡುವೆ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಸಿದ್ಧತೆ ನಡೆಸಿದ್ದು, ಗ್ರಾಮಸ್ಥರು ಆಕೆಯನ್ನು ಹಿಡಿದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿದ ಪತಿ ಸನೋಜ್, ಮಾನಾಟು ಪೊಲೀಸ್​ ಠಾಣೆಗೆ ಮಾಹಿತಿ ನೀಡಿ ಪ್ರಿಯಾಂಕ ಹಾಗೂ ಜಿತೇಂದ್ರನ ಜೊತೆ ವಿವಾಹ ಮಾಡಿಸಿದ್ದಾನೆ.(ಏಜೆನ್ಸೀಸ್​)