ನವದೆಹಲಿ: ಮುಂಬೈನಿಂದ ಸ್ಥಳಾಂತರಗೊಂಡ ನಂತರ ಶ್ರದ್ಧಾ ವಾಕರ್ರನ್ನು ಆಕೆಯ ಗೆಳೆಯ ಆಫ್ತಾಬ್ ಪೂನಾವಾಲಾ ಮೇ ತಿಂಗಳಲ್ಲಿ ಕೊಲೆ ಮಾಡಿದ್ದ. ಅದಾದ ಮೇಲೆ ಆಕೆಯ ಶವವನ್ನು 35 ತುಂಡು ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ಕಾವು ಇನ್ನೂ ಆರಿಲ್ಲ.
ಅಫ್ತಾಬ್ನ ವಿಚಾರಣೆ ಇನ್ನೂ ನಡೆಯುತ್ತಿದ್ದು ಈಗ ಪ್ರಕರಣ ಕೋರ್ಟ್ನ ಮೆಟ್ಟಿಲೇರಿದೆ. ಕೋರ್ಟ್ಲ್ಲಿ ಈತ ನಡೆದದ್ದೆಲ್ಲವನ್ನೂ ಆ ಕ್ಷಣ ಹಾಗೆ ಮಾಡಿಸಿತು. ಬೇಕೂ ಎಂದು ಕೊಲೆ ಮಾಡಿಲ್ಲ' ಎಂದಿದ್ದಾನೆ! ಈ ಮಾಹಿತಿಯನ್ನು ಅಫ್ತಾಬ್ನ ವಕೀಲ ಅಭಿನಾಶ್ ಕುಮಾರ್ ನೀಡಿದ್ದು 'ಘಟನೆಯ ನಂತರ ಅಫ್ತಾಬ್ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾನೆ' ಎಂದು ಹೇಳಿದ್ದಾರೆ.
ಸೋಮವಾರ ಅಧಿಕಾರಿಗಳು ನ್ಯಾಯಾಲಯಕ್ಕೆ 'ಅಫ್ತಾಬ್ನ ಹಿಂದಿನ ಹೇಳಿಕೆಗಳ ನಡುವೆ ಅನೇಕ ವ್ಯತ್ಯಾಸಗಳಿವೆ. ಈತ ತನಿಖಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾನೆ. ಹೀಗಾಗಿ ಆತನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲಾಗುವುದು' ಎಂದು ಮಾಹಿತಿ ನೀಡಿದರು.
ನಾರ್ಕೋ ವಿಶ್ಲೇಷಣೆ - ಅಥವಾ ಟ್ರೂಥ್ ಸೀರಮ್ - ಸೋಡಿಯಂ ಪೆಂಟೋಥಾಲ್‌ನಂತಹ ಔಷಧ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಯಾವುದೇ ಪರೀಕ್ಷೆಯ ಫಲಿತಾಂಶಗಳು ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲ. ಈ ಔಷಧಗಳು ಒಂದು ರೀತಿಯಲ್ಲಿ ಅಮಲುಕಾರಕ. ಆದ್ದರಿಂದ ಅಫ್ತಾಬ್ನ ನಾರ್ಕೊ ಟೆಸ್ಟ್ ಸಂದರ್ಭದ ಹೇಳಿಕೆಗಳನ್ನು ಸಾಕ್ಷಿ ಎಂದು ಪರಿಗಣಿಸಲಾಗುವುದಿಲ್ಲ.
ನ್ಯಾಯಾಲಯವು ಎರಡೂ ಪಕ್ಷದವರ ವಾದ ಆಲಿಸಿದ ನಂತರ ಅಫ್ತಾಬ್ನಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿತು. ಜೊತೆಗೆ ಅಧಿಕಾರಿಗಳು ಸಲ್ಲಿಸಿದ್ದ ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಪರೀಕ್ಷೆಯ ಮನವಿಯನ್ನು ಸ್ವೀಕರಿಸಿದೆ. (ಏಜೆನ್ಸೀಸ್)