ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿದ್ದ ಸಮಾಜಸೇವಕ ಜಯರಾಜ್ ಬಚು ಅವರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸ್ಥಳೀಯ ರಾಜಕಾರಣಿಯೂ ಆಗಿದ್ದ ಬಚು, ಹಿಂದೂಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಿಂದೂ ಯುನೈಟೆಡ್ ಮೂವ್‍ಮೆಂಟ್ (ಹಮ್) ಎಂಬ ಸಂಘಟನೆ ಹುಟ್ಟುಹಾಕಿ ಕಳೆದ 50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಇವರಿಗೆ 75 ವರ್ಷ ವಯಸ್ಸಾಗಿತ್ತು.
ಇವರಿಗೆ ಕಳೆದ ಹಿಂದೆ ಸೋಂಕು ತಗುಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
"ಅಸ್ತಿತ್ವದಲ್ಲಿರುವ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಮುದಾಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊರಗಿನಿಂದ ಕೆಲಸ ಮಾಡುತ್ತ ಇದೆ. ಆದರೆ ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಮಗೆ ಯಾರಾದರೂ ಬೇಕು" ಎಂದು ಸಾಯುವ ಸ್ವಲ್ಪ ದಿನಗಳ ಮುಂಚೆ ಬಾಚು ಹೇಳಿದ್ದರು ಎನ್ನಲಾಗಿದೆ.
ಕರೊನಾ ಸೋಂಕಿತರಾಗಿದ್ದ ನನ್ನ ತಂದೆಯನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ನಡೆದಿದೆ ಎಂದು ಅವರ ಪುತ್ರ ಉಮೇಶ್ ಮಾಹಿತಿ ನೀಡಿದ್ದಾರೆ. ಐದು ದಶಕಗಳಿಂದ ಸಮುದಾಯ ಮತ್ತು ರಾಜಕೀಯ ಪಕ್ಷದಲ್ಲಿ ಬಚು ಕೆಲಸ ನಿರ್ವಹಿಸಿದ್ದರು. ಹಿಂದೂಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಐದು ದಶಕಗಳಿಂದ ಇವರು ಹೋರಾಟ ಮಾಡುತ್ತಿದ್ದರು. ಇದೇ ಗುರಿ ಇಟ್ಟುಕೊಂಡು ಅವರು ಈ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)