ನ್ಯೂಸ್

ಸುಶಾಂತ್​ ಆತ್ಮಹತ್ಯೆ; ಸಲ್ಮಾನ್ ​ಖಾನ್​, ಕರಣ್​ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್​!

ಸುಶಾಂತ್​ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್​ನ ಕೆಲ ಸ್ಟಾರ್ ಕಲಾವಿದರು ಮತ್ತು ನಿರ್ಮಾಪಕರ ವಿರುದ್ಧ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಇದೀಗ ಬರೋಬ್ಬರಿ ಎಂಟು ಬಾಲಿವುಡ್​ ಮಂದಿ ಮೇಲೆ ಕೇಸ್​ ದಾಖಲಾಗಿದೆ. ವಕೀಲ ಸುಧೀರ್​ ಕುಮಾರ್ ಓಜಾ, ಪ್ರಕರಣ ದಾಖಲಿಸಿದ್ದು, ಅದರಲ್ಲಿ ಸಲ್ಮಾನ್​ ಖಾನ್​, ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ, ಏಕ್ತಾ ಕಪೂರ್​ ಸೇರಿ ಇನ್ನೂ ಹಲವರ ಹೆಸರುಗಳಿವೆ.

ನಟ ಕಮಲ್​ ಆರ್​ ಖಾನ್​ ಮಂಗಳವಾರವಷ್ಟೇ ಬಾಲಿವುಡ್ ಆಳುತ್ತಿರುವ ಕೆಲ ನಿರ್ಮಾಣ ಕಂಪನಿಗಳ ಬಗ್ಗೆ ಟ್ವಿಟ್​ ಮಾಡಿದ್ದರು. ಅದರಲ್ಲಿ ಸಲ್ಮಾನ್​ ಖಾನ್​ ಫಿಲಂಸ್​, ಕರಣ್​ ಜೋಹರ್​ ಒಡೆತನದ ಧರ್ಮ ಪ್ರೊಡಕ್ಷನ್ಸ್ ಮತ್ತು ಯಶ್​ ರಾಜ್​ ಫಿಲಂಸ್​ ಕಂಪನಿಗಳು ಸುಶಾಂತ್​ ಸಿಂಗ್​ ಸಿನಿಮಾ ಬ್ಯಾನ್​ ಮಾಡಿದ್ದವು. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಲಿವುಡ್​ನಲ್ಲಿ ಸುಶಾಂತ್​ಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಈ ರೀತಿ ಮಾಡಿದ್ದರಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ‘ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದಾರೆ. (ಏಜೆನ್ಸೀಸ್​)