ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ವಕೀಲ ಸಂಘದ ಆಡಳಿತ ಮಂಡಳಿಯ 2024-26ನೇ ಸಾಲಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರ್ಪಟಿದ್ದ ತೀವ್ರ ಪೈಪೋಟಿಯಲ್ಲಿ ಅಶೋಕ ಏಣಗಿ ಜಯಗಳಿಸಿದ್ದಾರೆ.
ಆರ್.ಯು. ಬೆಳ್ಳಕ್ಕಿ ವಿರುದ್ಧ ಅತೀ ಹೆಚ್ಚು ಮತಗಳನ್ನು ಪಡೆದ ಅಶೋಕ ಏಣಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಎ.ಎ. ಮುಗದುಮ್, ಪ್ರಧಾನ ಕಾರ್ಯದಶಿರ್ಯಾಗಿ ಸಿದ್ದೇಶ ಹೆಬ್ಬಳ್ಳಿ, ಜಂಟಿ ಕಾರ್ಯದಶಿರ್ ಸ್ಥಾನಕ್ಕೆ ಪ್ರಕಾಶ ಭಾವಿಕಟ್ಟಿ, ಖಜಾಂಚಿ ಸ್ಥಾನಕ್ಕೆ ಪ್ರಕಾಶ ರಟಗೇರಿ ಮತ್ತು ಮಹಿಳಾ ಪ್ರತಿನಿಧಿಯಾಗಿ ಶ್ರೀಕಲಾ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ಆಡಳಿತ ಮಂಡಳಿ 6 ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ 8 ಜನರು ಸ್ಪಧಿರ್ಸಿದ್ದರು. ಈ ಪೈಕಿ ಗುರುಸಿದ್ದಪ್ಪ ಬೆಳ್ಳಿಗಟ್ಟಿ, ಚನ್ನಬಸಪ್ಪ ಹೆಗ್ಗೇರಿ, ಎಂ.ಎಸ್. ಧನಶೆಟ್ಟಿ, ಮಂಜುನಾಥ ಧಾರವಾಡ, ಎಸ್.ಎಸ್. ಕಮತರ ಹಾಗೂ ಪ್ರಭಾವತಿ ಎಸ್. ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.