ಭುವನೇಶ್ವರ: ದೇಶೀಯ ನಿರ್ವಿುತ ಪಿನಾಕಾ ಕ್ಷಿಪಣಿಯ ಸುಧಾರಿತ ಅವತರಣಿಕೆಯನ್ನು ಒಡಿಶಾದ ಚಂಡಿಪುರದಲ್ಲಿ ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಏಕಕಾಲದಲ್ಲಿ ಆರು ಕ್ಷಿಪಣಿಗಳನ್ನು ಉಡಾವಣೆ ಮಾಡಲಾಯಿತು. ಸುಧಾರಿತ ಪಿನಾಕಾ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಯಾರಿಸಿದೆ. ಪ್ರಸ್ತುತ ಬಳಕೆಯಲ್ಲಿರುವ ಪಿನಾಕಾ ಎಂಕೆ-1 ಕ್ಷಿಪಣಿಗಳ ಬದಲಾಗಿ ಈ ಕ್ಷಿಪಣಿಗಳನ್ನು ಬಳಸಲಾಗುವುದು. ಪಿನಾಕಾ ಎಂಬಿಆಎರ್ಎಸ್ ಮುಕ್ತ ಹಾರಾಟ ಫಿರಂಗಿ ಕ್ಷಿಪಣಿಯನ್ನು ಹೊಂದಿದ್ದು, ವಿವಿಧ ಸಿಡಿತಲೆ ಮತ್ತು ಫ್ಯೂಸ್ಗಳೊಂದಿಗೆ 38 ಕಿ.ಮೀವರೆಗೆ ದಾಳಿ ನಡೆಸಬಹುದು. ಮಲ್ಟಿ ಟ್ಯೂಬ್ ಲಾಂಚರ್, ರಿಪ್ಲೆನಿಶ್ವೆುಂಟ್ ಕಮ್ ಲೋಡರ್ ವಾಹನ, ಕಮಾಂಡ್ ಪೋಸ್ಟ್ ವಾಹನ ಇದರಲ್ಲಿದೆ.
ತಲಾ ಆರು ಕ್ಷಿಪಣಿಗಳಿರುವ ಎರಡು ಪಾಡ್ಗಳಿವೆ. 48 ಸೆಕೆಂಡುಗಳಲ್ಲಿ ಆರು ಕ್ಷಿಪಣಿಗಳನ್ನು ಉಡಾವಣೆ ಮಾಡಬಹುದು. ಈವರೆಗೆ ಬಳಕೆಯಲ್ಲಿದ್ದ ಕ್ಷಿಪಣಿ ಕಡಿಮೆ ದೂರದವರೆಗೆ ದಾಳಿ ನಡೆಸಬಲ್ಲದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ. ಪುಣೆಯ ಡಿಆರ್ಡಿಒ, ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ, ಎಆರ್ಡಿಐ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ ಮತ್ತು ಎಚ್ಇಎಂಆರ್ಎಲ್ ಸಹಾಯದೊಂದಿಗೆ ಈ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ.