ಬೆಂಗಳೂರು: ನಟಿ ಅದಿತ ಪ್ರಭುದೇವ ಇಂದು (ನ.28) ಅರಮನೆ ಮೈದಾನದಲ್ಲಿ ಯುವರೈತ, ಉದ್ಯಮಿ ಯಶಸ್ವಿ ಪಾಟ್ಲ ಅವರೊಂದಿಗೆ ವಿವಾಹ ಬದುಕಿಗೆ ಪ್ರವೇಶಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ನವವಧುಗಳಾದ ಅದಿತಿ-ಯಶಸ್ವಿ ಜೋಡಿ ಮಿಂಚಿದರು.
ಅದಿತಿ ಮದುವೆ ಕಾರ್ಯಕ್ರಮಗಳ ಭಾಗವಾಗಿ ಶನಿವಾರ ಅರಶಿನ ಶಾಸ್ತ್ರ ಹಾಗೂ ಭಾನುವಾರ ಮೆಹೆಂದಿ ಶಾಸ್ತ್ರ ಹಾಗೂ ಸಂಜೆ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದವು.
ಅದಿತಿ ಪ್ರಭುದೇವ ಮದುವೆಗೆ ಚಿತ್ರರಂಗ, ರಾಜಕೀಯ ಹಾಗೂ ಸಮಾಜದ ವಿವಿಧ ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ಧಾರೆ.
ಅದಿತಿ ಮತ್ತು ಯಶಸ್ವಿ ಅವರ ನಿಶ್ಚಿತಾರ್ಥ ಕಳೆದ ವರ್ಷವೇ ನೆರವೇರಿತ್ತು. ಇಂದು ಬೆಳಗ್ಗೆ 9:30ರಿಂದ 10:32ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯಿತು.
ಅಭಿಮಾನಿಗಳು ನವ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.