ಮುಂಬೈ: ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಆದಿಪುರುಷ್' ಚಿತ್ರ ಬಾಲಿವುಡ್ ಅಂಗಳದಲ್ಲಿ ಬಿಡುಗಡೆಗೊಂಡು ಭಾರೀ ವಿರೋಧವನ್ನು ಪಡೆದುಕೊಂಡಿತ್ತು. ವಿವಾದಗಳಿಗೆ ನೇರ ಗುರಿಯಾದ ಈ ಸಿನಿಮಾ ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿದೆ.
ಭಾರತದ ಮಹಾಕಾವ್ಯ ರಾಮಾಯಣ ಕಥೆಯನ್ನು ಆಧರಿಸಿದ ಆದಿಪುರುಷ್ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದರು. ಭಗವಂತ ರಾಮನ ಪಾತ್ರದಲ್ಲಿ ಪ್ರಭಾಸ್ ಮತ್ತು ಸೀತಾ ದೇವಿ ಪಾತ್ರದಲ್ಲಿ ಕೃತಿ ಸನೋನ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡರೂ, ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಳ್ಳಲಿಲ್ಲ.
ಚಿತ್ರದ ಮೇಕಿಂಗ್ ಹಾಗೂ ವಿಎಫ್ಎಕ್ಸ್, ಪಾತ್ರಗಳನ್ನು ಪರಿಚಯಿಸಿದ ರೀತಿಗೆ ಸಿನಿಪ್ರೇಕ್ಷಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ಚಿತ್ರವು ಸದ್ದಿಲ್ಲದೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗಯಾಗಿದೆ. ಪ್ರಸ್ತುತ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಪ್ರತಿ ಭಾಷೆಯ ಚಿತ್ರಕ್ಕೂ ಇಂಗ್ಲಿಷ್ ಸಬ್ಟೈಟಲ್ ನೀಡಲಾಗಿದೆ,(ಏಜೆನ್ಸೀಸ್).