ಕೋಲಾರದ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷ ವೈ.ಶಿವಕುಮಾರ್​ ಮಾತನಾಡಿದರು. ನೀಲಕಂಠೇಗೌಡ, ಬಿ.ಶಿವಕುಮಾರ್​, ಅಶ್ವತ್ಥ್​ರೆಡ್ಡಿ ಇದ್ದರು. 
ನ್ಯೂಸ್

ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಿ

ಕೋಲಾರ: ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಜಾರಿಗೆ ತರಬೇಕು. ಸೌಲಭ್ಯಗಳಿಂದ ಅರ್ಹರು ವಂಚನೆಯಾಗದಂತೆ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್​ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಉದ್ದೇಶ ಈಡೇರಬೇಕಾದರೆ ಲಾನುಭವಿಗಳಿಗೆ ಸೌಲಭ್ಯ ತಲುಪಬೇಕು ಎಂದು ತಿಳಿಸಿದರು.
ಐದು ಯೋಜನೆಗಳು ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದ್ದು, ಇಂತಹ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ಯೋಜನೆ ಕುರಿತು ಜನರಲ್ಲಿ ವ್ಯಾಪಕ ಅರಿವು ಮೂಡಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಯೋಜನೆ ಅನುಷ್ಠಾನದಲ್ಲಿ ಯಾವುದೇ ಪಕ್ಷಬೇಧ ಇರಬಾರದು. ಒಂದು ಸ್ಥಳದಿಂದ ಮತ್ತೊಂದೊ ಸ್ಥಳಕ್ಕೆ ಸ್ಥಳಾಂತರವಾಗಿದ್ದರೂ ನಿಯಮಗಳನ್ನು ಸಡಿಲಗೊಳಿಸಿ ಸೌಲಭ್ಯ ತಲುಪಿಸಬೇಕು. ಸಮಾಜದ ಪ್ರತಿಯೊಬ್ಬರಿಗೂ ಯೋಜನೆಯ ಪ್ರಯೋಜನ ತಲುಪಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರವನ್ನು ಸರ್ಕಾರ ರಚನೆ ಮಾಡಿದೆ, ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು. ಯೋಜನೆ ಅನುಷ್ಠಾನ ಪ್ರಗತಿ ಕುರಿತು ಸರ್ಕಾರಕ್ಕೆ ಪ್ರಾಧಿಕಾರದಿಂದ ವರದಿ ನೀಡಲಾಗುವುದು. ಒಂದು ವೇಳೆ ಪ್ರಗತಿ ಸಾಧನೆ ಕುಂಠಿತವಾಗಿದ್ದರೆ ಶಿಸ್ತು ಕ್ರಮಕ್ಕೆ ಶಿಾರಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್​, ಪ್ರಾಧಿಕಾರದ ಉಪಾಧ್ಯಕ್ಷ ಹಿದಾಯಿತ್​ ಉಲ್ಲಾ ಷರೀಫ್​, ನಾಗೇಶ್ವರಿ,ಸದಸ್ಯರಾದ ನೀಲಕಂಠೇಗೌಡ, ಮಹ್ಮದ್​ ಮುನೀರ್​, ಉಮಾದೇವಿ, ಪಾರ್ಥಸಾರಥಿ, ನಾಗರಾಜ್​, ಮಂಗಳಾ, ಮಮತಾರೆಡ್ಡಿ, ಭಾಗ್ಯಮ್ಮ, ಆಹಾರ ಇಲಾಖೆಯ ಉಪ ನಿರ್ದೇಶಕಿ ಲತಾ, ಬೆಸ್ಕಾಂ ಇಲಾಖೆಯ ಶುಭಾ, ಕೆಎಸ್​ಆರ್​ಟಿಸಿ ಡಿಸಿ ಶ್ರೀನಾಥ್​ ಹಾಜರಿದ್ದರು.