ಕೋಲಾರದಲ್ಲಿ ಮೇಲ್‌ಮರವತ್ತೂರಿಗೆ ತೆರಳುವ ಓಂಶಕ್ತಿ ಭಕ್ತರಿಗೆ ಕುಡಾ ವಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಬಸ್ ವ್ಯವಸ್ಥೆ ವಾಡಿದ್ದರು. ನಗರಸಭೆ ಸದಸ್ಯ ಗುಣಶೇಖರನ್, ಬಿಜೆಪಿ ಮುಖಂಡರಾದ ಸಾ.ವಾ ಬಾಬು, ಭರತ್ ಕುವಾರ್, ಅಶೋಕ್, ಕಾವ್ಯಾ ಇದ್ದರು. 
ನ್ಯೂಸ್

ಸಿದ್ದರಾಮಯ್ಯಗೆ ಬಿಜೆಪಿಯಿಂದ ತಕ್ಕ ಉತ್ತರ

Bengaluru Rural

ಕೋಲಾರ: ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಬಿಜೆಪಿ ಸಮರ್ಥವಾಗಿ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಕುಡಾ ವಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಕಾರಂಜಿಕಟ್ಟೆಯ ಧರ್ಮರಾಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್‌ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ವಾಡಿ ವಾತನಾಡಿದರು.

ಕ್ಷೇತ್ರದಲ್ಲಿ ಬಿಜೆಪಿ ಎಲ್ಲಿದೆ ಎಂದು ಕೇಳುವ ಸಿದ್ದರಾಮಯ್ಯ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದೇವೆ. ಪ್ರತಿಯೊಂದು ಬೂತ್‌ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ. 70 ವರ್ಷ ದೇಶ ಆಳಿದ ಕಾಂಗ್ರೆಸ್‌ಗೆ ಬೂತ್ ಏಜೆಂಟ್‌ಗಳು ಇಲ್ಲ ಎಂಬುದನ್ನು ಅರ್ಥವಾಡಿಕೊಂಡು ವಾತಾಡಬೇಕು ಎಂದರು.

ಬಿಜೆಪಿಯಲ್ಲಿ ಬೆಳೆದ ವ್ಯಕ್ತಿಗಳಿಗೆ ಮೊದಲು ಭಾರತೀಯ, ನಂತರ ಹಿಂದು, ಕೊನೆಯದಾಗಿ ಜಾತಿ ಬರುತ್ತದೆ. ಸಿದ್ದರಾಮಯ್ಯ ಮೊದಲೇ ಹಿಂದು ವಿರೋಧಿ. ಅಂತಹವರಿಗೆ ಕ್ಷೇತ್ರದ ಜನ ಮತ ನೀಡಲ್ಲ. ಕಾಂಗ್ರೆಸ್ ಸವಾವೇಶಕ್ಕೆ ಮುಳಬಾಗಿಲು, ಬಂಗಾರಪೇಟೆ ಕ್ಷೇತ್ರದ ಜನರನ್ನು ಕರೆ ತಂದು ಸವಾವೇಶ ವಾಡಿದ್ದಾರೆಯೇ ಹೊರತು ಕೋಲಾರ ಕ್ಷೇತ್ರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಲಿಲ್ಲ. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದರು.