ನ್ಯೂಸ್

ಬೇನಾಮಿ ಕಂಪನಿ ವಿಳಾಸದಲ್ಲಿತ್ತು ದನದ ಕೊಟ್ಟಿಗೆ!

  • ಆಪ್ತ ಸಹಾಯಕಿ, ನಿಕಟವರ್ತಿಗಳು, ಬಾಡಿಗೆದಾರರ ಹೆಸರಿನಲ್ಲಿ ಸ್ಥಾಪನೆ
  • ಸಿಸಿಬಿಯ ಎಸಿಪಿ ದರ್ಜೆ ಅಧಿಕಾರಿಯಿಂದ ತನಿಖೆ

ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಗಳ ಹಿಂದಿನ ರೋಚಕ ಸಂಗತಿಗಳು ಅನಾವರಣಗೊಳ್ಳಲಾರಂಭಿಸಿವೆ. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ದನದ ಕೊಟ್ಟಿಗೆಯ ವಿಳಾಸ ನೀಡಿ ನಕಲಿ ಕಂಪನಿಗಳನ್ನು ಸ್ಥಾಪಿಸಲಾಗಿತ್ತೆಂಬ ಸತ್ಯ ಕಂಡುಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಸಿಐಡಿ ವಿಚಾರಣೆಗೊಳಪಟ್ಟ ಬಳಿಕ ಮಹಿಳಾ ಉದ್ಯಮಿ ಜೀವಾ ಆತ್ಮಹತ್ಯೆಗೆ ಶರಣಾಗಿದ್ದರು. ಜೀವಾ ಸಾವಿಗೆ ಅಧಿಕಾರಿಗಳ ದೌರ್ಜನ್ಯವೇ ಕಾರಣ ಎಂದು ಮೃತರ ಸಹೋದರಿ ದೂರು ನೀಡಿದ ಬೆನ್ನಲ್ಲೆ ತನಿಖೆ ಹೊಣೆ ಸಿಸಿಬಿಯ ಎಸಿಪಿ ದರ್ಜೆ ಅಧಿಕಾರಿ ಹೆಗಲೇರಿದೆ.

ವಾಲ್ಮೀಕಿ ಹಗರಣಕ್ಕಿಂತ ದೊಡ್ಡದು

ನಿಗಮದ ಮಾಜಿ ಎಂಡಿ ಆರ್. ಲೀಲಾವತಿ, ಮಾಜಿ ಜಿಎಂ ಬಿ.ಕೆ. ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ, ಹಗರಣದ ಕಿಂಗ್​ಪಿನ್​ಗಳಾಗಿದ್ದಾರೆ. ಇದರಲ್ಲಿ ನಾಗರಾಜಪ್ಪ, ತನ್ನ ಆಪ್ತ ಸಹಾಯಕಿ, ಆಕೆಯ ಸಹೋದರ, ಮನೆ ಬಾಡಿಗೆದಾರರು, ನಿಕಟವರ್ತಿಗಳ ಹೆಸರಿನಲ್ಲಿ ನಕಲಿ ಕಂಪನಿ, ಬ್ಯಾಂಕ್ ಖಾತೆಗಳನ್ನು ತೆರೆದು ಕೋಟ್ಯಂತರ ರೂ. ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. 90 ಕೋಟಿ ರೂ.ಗೂ ಅಧಿಕ ಹಣ ದೋಚಿದ್ದಾರೆ. ಈ ಪ್ರಕರಣ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನೇ ಮೀರಿಸುವಷ್ಟು ದೊಡ್ಡದಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಭೋವಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 2016ರ ಫೆಬ್ರವರಿ 29ರಂದು ‘ಭೋವಿ ಅಭಿವೃದ್ಧಿ ನಿಗಮ’ಸ್ಥಾಪಿಸಿತು. ಪ್ರತಿ ವರ್ಷ ಬಜೆಟ್​ನಲ್ಲಿ ಅನುದಾನ ಸಹ ಬಿಡುಗಡೆ ಮಾಡುತ್ತಿದೆ.

ಬಾಡಿಗೆದಾರರ ಹೆಸರಿನಲ್ಲಿ ಕಂಪನಿ

ಆತ್ಮಹತ್ಯೆಗೆ ಶರಣಾದ ಜೀವಾ ಮತ್ತು ಈಕೆ ಸಹೋದರಿ ಸಂಗೀತಾ ಬನಶಂಕರಿಯ ಬಿ.ಕೆ. ನಾಗರಾಜಪ್ಪ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ನಾಗರಾಜಪ್ಪ ಹೆಸರಿನಲ್ಲೂ ನಕಲಿ ಕಂಪನಿ ತೆರೆದಿರುವುದು ಬೆಳಕಿಗೆ ಬಂದಿದೆ. ಕಂಪನಿ ವಿಳಾಸದ ಬೆನ್ನು ಹತ್ತಿದಾಗ ಅದೊಂದು ದನದ ಕೊಟ್ಟಿಗೆ ಎಂಬುದು ಗೊತ್ತಾಗಿದೆ. ಜೀವಾ ಹೆಸರಿನಲ್ಲಿ ಅನಿಕಾ ಎಂಟರ್ ಪ್ರೖೆಸಸ್ ಕಂಪನಿ ಸ್ಥಾಪಿಸಿ ಕೋಟೆಕ್ ಮಹೇಂದ್ರ ಬ್ಯಾಂಕ್​ನಲ್ಲಿ ಖಾತೆ ತೆರೆಯಲಾಗಿತ್ತು. ಇದಕ್ಕೆ 7.16 ಕೋಟಿ ರೂ. ವರ್ಗಾವಣೆ ಆಗಿದೆ. ಈಕೆಯ ಸಹೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ ಕಂಪನಿ ಸ್ಥಾಪಿಸಿದ್ದು, ಕೆನರಾ ಬ್ಯಾಂಕ್​ನಲ್ಲಿ ಖಾತೆ ತೆರೆದು 3.79 ಕೋಟಿ ರೂ. ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಅಲ್ಲದೆ, ಕಂಪನಿ ವಿಳಾಸಕ್ಕೆ ಹೋಗಿ ಸ್ಥಳ ಮಹಜರು ಸಹ ನಡೆಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಜೀವಾ ಮತ್ತು ಈಕೆ ಸಹೋದರಿ ಸಂಗೀತಾ ಬನಶಂಕರಿಯ ಬಿ.ಕೆ. ನಾಗರಾಜಪ್ಪ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ನಾಗರಾಜಪ್ಪ ಹೆಸರಿನಲ್ಲೂ ನಕಲಿ ಕಂಪನಿ ತೆರೆದಿರುವುದು ಬೆಳಕಿಗೆ ಬಂದಿದೆ. ಕಂಪನಿ ವಿಳಾಸದ ಬೆನ್ನು ಹತ್ತಿದಾಗ ಅದೊಂದು ದನದ ಕೊಟ್ಟಿಗೆ ಎಂಬುದು ಗೊತ್ತಾಗಿದೆ. ಜೀವಾ ಹೆಸರಿನಲ್ಲಿ ಅನಿಕಾ ಎಂಟರ್ ಪ್ರೖೆಸಸ್ ಕಂಪನಿ ಸ್ಥಾಪಿಸಿ ಕೋಟೆಕ್ ಮಹೇಂದ್ರ ಬ್ಯಾಂಕ್​ನಲ್ಲಿ ಖಾತೆ ತೆರೆಯಲಾಗಿತ್ತು. ಇದಕ್ಕೆ 7.16 ಕೋಟಿ ರೂ. ವರ್ಗಾವಣೆ ಆಗಿದೆ. ಈಕೆಯ ಸಹೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ ಕಂಪನಿ ಸ್ಥಾಪಿಸಿದ್ದು, ಕೆನರಾ ಬ್ಯಾಂಕ್​ನಲ್ಲಿ ಖಾತೆ ತೆರೆದು 3.79 ಕೋಟಿ ರೂ. ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಅಲ್ಲದೆ, ಕಂಪನಿ ವಿಳಾಸಕ್ಕೆ ಹೋಗಿ ಸ್ಥಳ ಮಹಜರು ಸಹ ನಡೆಸಲಾಗಿದೆ.

ಸ್ವಯಂ ಉದ್ಯೋಗಕ್ಕೆ ನೇರಸಾಲ ಯೋಜನೆ, ಉದ್ಯಮಶೀಲತಾ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಆದರೆ, 2021-22 ಮತ್ತು 2022-23ನೇ ಸಾಲಿನ ಪ್ರಥಮ ತ್ರೖೆ ಮಾಸಿಕ (ಜೂನ್​ವರೆಗೆ) ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿ ಹಣಕಾಸು ದುರ್ಬಳಕ್ಕೆ ಮಾಡಿಕೊಂಡಿದ್ದರು. ಆಂತರಿಕ ಲೆಕ್ಕ ಪರಿಶೋಧನೆ ವರದಿ ಪ್ರಕಾರ 56.55 ಕೋಟಿ ರೂ. ಅನುದಾನ ದುರ್ಬಳಕ್ಕೆ ಮಾಡಿರುವುದು ದೃಢವಾಗಿತ್ತು. ಅದೇ ರೀತಿ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿ ಪ್ರಕಾರ 59.68 ಕೋಟಿ ರೂ. ದುರ್ಬಳಕೆ ಬೆಳಕಿಗೆ ಬಂದಿದೆ. ಇದೀಗ ಸಿಐಡಿ ಅಧಿಕಾರಿಗಳ ತನಿಖೆ ವೇಳೆ 90 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸರ್ಕಾರಕ್ಕೆ ವಂಚನೆ ಮಾಡಿರುವುದು ಮಾಹಿತಿ ಲಭ್ಯವಾಗುತ್ತಿದೆ.

ಆಪ್ತ ಸಹಾಯಕಿ ಖಾತೆಗೆ ವರ್ಗ: ನಾಗರಾಜಪ್ಪ ಆಪ್ತ ಸಹಾಯಕಿ (ಗುತ್ತಿಗೆ ನೌಕರಿ) ಯಶಸ್ವಿನಿ, ಹೆಸರಿನಲ್ಲಿ ನ್ಯೂ ಡ್ರೀಮ್ ಎಂಟರ್ ಪ್ರೖೆಸಸ್ ಕಂಪನಿ ತೆರೆದು ಆಕ್ಸಿಸ್ ಬ್ಯಾಂಕ್​ನಲ್ಲಿ ಖಾತೆ ಮಾಡಿಸಲಾಗಿದೆ. ಈ ಖಾತೆಗೆ 8.78 ಕೋಟಿ ರೂ. ಜಮೆ ಆಗಿದೆ. ಈಕೆಯ ಸಹೋದರ ಕಾರ್ತಿಕ್ ಗೌಡ ಹೆಸರಿನಲ್ಲಿ ಆದಿತ್ಯಾ ಎಂಟರ್ ಪ್ರೖೆಸಸ್ ಕಂಪನಿ ತೆರೆದು, ಆಕ್ಸಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಗೆ 4.76 ಕೋಟಿ ರೂ. ನಿಗಮದಿಂದ ಜಮೆಯಾಗಿದೆ.

ನಿಕಟವರ್ತಿಗಳ ಖಾತೆಗೂ ಹಣ

ಬಿ.ಕೆ. ನಾಗರಾಜಪ್ಪ ನಿಕಟವರ್ತಿಯಾದ ಸಿ. ಸಂತೋಷ್ ಹೆಸರಿನಲ್ಲಿ ಸೋಮನಾಥೇಶ್ವರ ಎಂಟರ್ ಪ್ರೖೆಸಸ್ ಕಂಪನಿ ಸ್ಥಾಪಿಸಿದ್ದು, ಐಸಿಐಸಿಐ ಬ್ಯಾಂಕ್ ಖಾತೆ ತೆರೆದು 9.66 ಕೋಟಿ ರೂ. ಜಮೆ ಮಾಡಿಕೊಂಡು ವಂಚಿಸಿದ್ದಾರೆ. ಮತ್ತೊಬ್ಬ ಕಾಂತು ಒಡೆಯರ್ ಮತ್ತು ಸುಪ್ರೀತಾ ಕಾಂತು ಒಡೆಯರ್ ಹೆಸರಿನ ಬ್ಯಾಂಕ್ ಖಾತೆಗೆ ನ್ಯೂ ಡ್ರೀಮ್್ಸ ಎಂಟರ್ ಪ್ರೖೆಸಸ್ ಕಂಪನಿಯಿಂದ 11.40 ಲಕ್ಷ ರೂ. ಜಮೆಯಾಗಿದೆ. ಮತ್ತೊಬ್ಬ ಏಜೆಂಟ್ ಮತ್ತು ನಿಕಟವರ್ತಿ ಪದ್ಮಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ. ನಿಗಮ ಮತ್ತು ಬ್ಯಾಂಕ್​ಗಳ ಸಂಪರ್ಕ ಅಧಿಕಾರಿ ಆಗಿದ್ದ ಅಭಿಲಾಷ್, ಹಲವು ನಕಲಿ ಕಂಪನಿ ಸ್ಥಾಪಿಸಿ ಅವುಗಳ ಬ್ಯಾಂಕ್ ಖಾತೆಗೆ 1.26 ಕೋಟಿ ರೂ. ವರ್ಗವಣೆ ಮಾಡಿ ಲಪಟಾಯಿಸಿದ್ದಾರೆ.

ಸಹೋದರಿ ಹೆಸರಿಗೆ 1.48 ಕೋಟಿ ರೂ.ಜಮೆ

ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಲೀಲಾವತಿ, ತನ್ನ ಸಹೋದರಿ ಮಂಗಳಾರಾಮು ಹೆಸರಿನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 1.48 ಕೋಟಿ ರೂ. ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಆನಂತರ ವಿತ್ ಡ್ರಾ ಮಾಡಿಕೊಂಡು ನಿಗಮಕ್ಕೆ ವಂಚನೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬನಶಂಕರಿ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಸಿಬಿಯ ಎಸಿಪಿ ದರ್ಜೆ ಅಧಿಕಾರಿಯಿಂದ ತನಿಖೆ ಶುರುವಾಗಿದೆ. | ಬಿ. ದಯಾನಂದ್, ನಗರ ಪೊಲೀಸ್ ಆಯುಕ್ತ https://www.vijayavani.net/csk-picked-its-team-in-ipl-2025-auction