ಬೆಂಗಳೂರು:ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಸಖತ್ ಫೇಮಸ್ ಆದ ಬಾಲಿವುಡ್ ನಟಿ ಅದಾ ಶರ್ಮಾ. ಮುಗ್ದ ಸೌಂದರ್ಯ, ಕ್ಯೂಟ್ ಸ್ಮೈಲ್, ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿರಂಗದಲ್ಲಿ ಪ್ರಸಿದ್ಧರಾಗಿದ್ದಾರೆ. ಈ ನಟಿ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳಂತೆ.
2015 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ರಣ ವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಬೆಡಗಿ ಅದಾ ಶರ್ಮಾ. ಈಕೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನಗೆ ಇರುವ ಅನಾರೋಗ್ಯದ ಕುರಿತಾಗಿ ರಿವೀಲ್ ಮಾಡಿದ್ದಾರೆ.
ನಾಯಕಿ ಅದಾ ಶರ್ಮಾ ಅವರು ಕೇರಳ ಸ್ಟೋರೀಸ್ ಮತ್ತು ಬಸ್ತಾರ್ ಚಿತ್ರಗಳಿಂದ ತೊಂದರೆಯಲ್ಲಿದ್ದಾರೆ ಎಂದು ಹೇಳಿದರು. ಈ ಚಿತ್ರಗಳಿಗಾಗಿ ತೂಕ ಇಳಿಸಿಕೊಂಡ ನಂತರ ಎಂಡೊಮೆಟ್ರಿಯೊಸಿಸ್ ಎಂಬ ಅಪರೂಪದ ಕಾಯಿಲೆ ಬಂದಿತು ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕಾಯಿಲೆಯಿಂದ ನಾನು ತುಂಬಾ ಬಳಲುತ್ತಿದ್ದೇನೆ. ಪಿರಿಯಡ್ಸ್ ತಡೆರಹಿತವಾಗಿ ಮುಂದುವರಿಯುತ್ತದೆ. ಸುಮಾರು 48 ದಿನಗಳ ಕಾಲ ರಕ್ತಸ್ರಾವವಾಗುತ್ತದೆ ಎಂದು ನೋವು ತೋಡಿಕೊಂಡರು.
'ಈ ಚಿತ್ರಗಳಿಗಾಗಿ ನಾನು ಬೇರೆ ದೇಹದಲ್ಲಿ ಇರಬೇಕಿತ್ತು. ಕೇರಳ ಸ್ಟೋರಿಗಾಗಿ, ಮೊದಲಾರ್ಧದಲ್ಲಿ ನಾನು ಸಣ್ಣ ಮತ್ತು ತೆಳ್ಳಗೆ ಇರಬೇಕಾಗಿತ್ತು, ಹಾಗಾಗಿ ನಾನು ಕಾಲೇಜು ಹುಡುಗಿಯಂತೆ ಕಾಣುತ್ತೇನೆ. ಕಮಾಂಡೋಗಾಗಿ, ನಾನು ಸ್ನಾಯು ಹೊಂದಿರಬೇಕಿತ್ತು. ಸನ್‌ಫ್ಲವರ್‌ಗಾಗಿ, ನಾನು ಬಾರ್ ಡ್ಯಾನ್ಸರ್ ಆಗಿ ಮಾದಕವಾಗಿ ಕಾಣಬೇಕಾಗಿತ್ತು. ಬಸ್ತಾರ್‌ಗಾಗಿ, ನಾನು ವಿಶಾಲವಾಗಿ ಮತ್ತು ದೊಡ್ಡವಳಾಗಿರಬೇಕಾಗಿತ್ತು. ಈ ರೂಪಾಂತರಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ' ಎಂದು ಶರ್ಮಾ ಹೇಳಿದ್ದಾಳೆ.
'ನಾನು ನನ್ನ ಜೀವನದುದ್ದಕ್ಕೂ ಜಿಮ್ನಾಸ್ಟ್ ಆಗಿದ್ದೇನೆ ಮತ್ತು ನನ್ನ ಬೆನ್ನಿನ ನಮ್ಯತೆ ಯಾವಾಗಲೂ ನನ್ನ ಹೆಮ್ಮೆಯಾಗಿತ್ತು. ಆದರೆ, ಈ ಸಂದರ್ಭದಲ್ಲಿ, ನನ್ನ ಬೆನ್ನು ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು ಮತ್ತು ಚಿತ್ರವು ಒತ್ತಡದಿಂದ ಕೂಡಿತ್ತು. ಈ ಕಾರಣದಿಂದ ಎಂಡೊಮೆಟ್ರಿಯೊಸಿಸ್ ಸ್ಥಿತಿಗೆ ಒಳಗಾದೆ. ತಡೆರಹಿತವಾಗಿ ಪೀರಿಯಡ್ಸ್ 48 ದಿನಗಳವರೆಗೆ ಮುಂದುವರೆಯಿತು' ಎಂದು ಅದಾ ಆ ಸಂದರ್ಭದಲ್ಲಿ ತಾವು ಅನುಭವಿಸಿದ ಕೆಟ್ಟ ಆರೋಗ್ಯ ಸ್ಥಿತಿ ಬಗ್ಗೆ ತೆರೆದಿಟ್ಟಿದ್ದಾರೆ.
ನಾಯಕಿಯರನ್ನು ಕಂಡರೆ.. ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಎಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಚಿತ್ರಕ್ಕಾಗಿ ಅವರು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂದು ಯಾರೂ ಯೋಚಿಸುವುದಿಲ್ಲ. ಸಿನಿಮಾದ ಮೇಕ್ ಓವರ್ ನಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಿಲುಕುತ್ತಾರೆ ಎಂದು ಯಾರೂ ಊಹಿಸುವುದಿಲ್ಲ.