ದಿವಂಗತ ನಟ ವಿಷ್ಣುವರ್ಧನ್ಗೆ ಮರಣೋತ್ತರವಾಗಿ 'ಕರ್ನಾಟಕರತ್ನ' ಪ್ರಶಸ್ತಿ ನೀಡುವಂತೆ ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಮಂಗಳವಾರ (ಸೆ.2) ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, '' ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ನನ್ನ ಭೇಟಿಯಾಗಿ ವಿಷ್ಣುವರ್ಧನ್ ಅವರಿಗೆ 'ಕರ್ನಾಟಕರತ್ನ' ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ'' ಎಂದಿದ್ದಾರೆ.
ಇದನ್ನೂ ಓದಿ:ಉಳ್ಳಾಲದಲ್ಲಿ ಕಸ ಕಂಟಕ : ಮುನ್ನೂರು ವಿಲೇವಾರಿ ಘಟಕ ಬಳಿ ತ್ಯಾಜ್ಯ ದರ್ಶನ : ಮದನಿನಗರ ರಸ್ತೆ ಡಂಪಿಂಗ್ ಯಾರ್ಡ್
ಅಲ್ಲದೆ, ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.