ಸ್ಯಾಂಡಲ್ವುಡ್ನ ಹಿರಿಯ ನಟಿ ವಿಜಯಲಕ್ಷ್ಮೀ ಇಂದು ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ತಾವು ಮಾತ್ರೆ ನುಂಗಿದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿರುವ ವಿಜಯಲಕ್ಷ್ಮೀ, ತಮಿಳುನಾಡಿನ ರಾಜಕಾರಣಿ, ಎನ್ಕೆಟಿ ಪಕ್ಷದ ಮುಖಂಡ ಸೀಮನ್ ಮತ್ತು ಹರಿ ನಾಡಾರ್ ಎಂಬುವರ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ಆತ್ಮಹತ್ಯೆ ನಿರ್ಧಾರಕ್ಕೆ ಇವರೇ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ನಾನು ಸತ್ತ ಮೇಲೆ ಇವರಿಬ್ಬರನ್ನೂ ಜೈಲಿಗೆ ಹಾಕಿ. ಕನ್ನಡ ಹಾಗೂ ತಮಿಳಿನ ಜನರಲ್ಲಿ ಬೇಡಿಕೊಳ್ಳುತ್ತೇನೆ..ಇವರಿಬ್ಬರಿಗೆ ಯಾರೂ ಜಾಮೀನು ಕೊಡಬೇಡಿ ಎಂದು ಅಳುತ್ತ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.
ವಿಜಯಲಕ್ಷ್ಮೀ ಅವರು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಇದೇ ಮೊದಲಲ್ಲ. 2006ರಲ್ಲಿಯೂ ಒಮ್ಮೆ ಇದೇ ಪ್ರಯತ್ನ ಮಾಡಿದ್ದರು. ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಹಲವು ಟಿವಿ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: Video: ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ … ವಿಜಯಲಕ್ಷ್ಮೀ-ರವಿಪ್ರಕಾಶ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್
ಸೀಮನ್ ತನ್ನನ್ನು ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾರೆಂದು ಜನವರಿಯಲ್ಲಿ ವಿಜಯಲಕ್ಷ್ಮೀ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಅವರು ನನ್ನೊಂದಿಗೆ ಸಂಬಂಧ ಬೆಳೆಸಿದ್ದರು ಎಂಬುದಕ್ಕೆ ನನ್ನ ಬಳಿ 700ಕ್ಕೂ ಅಧಿಕ ಸಾಕ್ಷಿಗಳಿವೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ನಟಿ ವಿಜಯಲಕ್ಷ್ಮೀಗೆ ಕಿಚ್ಚ ಸುದೀಪ್ ಧನ ಸಹಾಯ
ಇಂದೂ ಕೂಡ ಅವರ ಹೆಸರನ್ನೇ ಪುನರುಚ್ಚರಿಸಿದ್ದಾರೆ. ನನ್ನ ಸಾವಿಗೆ ಹರಿ ನಡಾರ್ ಮತ್ತು ಸೀಮನ್ ಕಾರಣ. ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದಕ್ಕೆ ಅವರೇ ಹೊಣೆ. ಸಾಮಾಜಿಕ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ವೇಶ್ಯಾವೃತ್ತಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ಕಾಟ ಕೊಡುತ್ತಿದ್ದಾರೆ. ಇವರನ್ನೆಂದೂ ಕ್ಷಮಿಸಬೇಡಿ ಎಂದು ನಟಿ ಹೇಳಿದ್ದಾರೆ.
ವಿಜಯಲಕ್ಷ್ಮೀ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)