ಮುಂಬೈ: ನಟಿ ಊರ್ವಶಿ ರೌಟೇಲಾ ಸದ್ಯ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಆಕೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದಾಳೆ. ಅದು ಸಿನಿಮಾ ಶೂಟಿಂಗ್‌ನ ಕ್ಲಿಪ್ ಮಾತ್ರ ಎಂದು ಹೇಳಿದ್ದಾಳೆ.
ಇದನ್ನೂ ಓದಿ:
ಊರ್ವಶಿ ರೌಟೇಲಾ ಬಾತ್ರೂಂ ವೀಡಿಯೋ ಇತ್ತೀಚೆಗೆ ವರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ನಟಿ ಪ್ರತಿಕ್ರಯಿಸಿದ್ದಾಳಡ. ಅದು ನನ್ನ ಹೊಸ ಚಿತ್ರ 'ಗುಸ್ಪೇಟಿಯಾ'. ದಲ್ಲಿನ ನನ್ನ ದೃಶ್ಯವೊಂದು ಇತ್ತೀಚೆಗೆ ವೈರಲ್ ಆಗಿದೆ. ಇದು ನನಗೆ ನೋವುಂಟು ಮಾಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ವೀಡಿಯೋಗಳು ಮತ್ತು ಫೋಟೋಗಳು ಸೋರಿಕೆಯಾಗಿದ್ದರಿಂದ ನಾನು ನಿರಾಶೆಗೊಂಡಿದ್ದೇನೆ. ಇದು ನನ್ನ ವೈಯಕ್ತಿಕ ವೀಡಿಯೊ ಅಲ್ಲ. ಜೀವನದಲ್ಲಿ ಯಾವುದೇ ಹುಡುಗಿಗೆ ಇಂತಹ ಕಹಿ ಅನುಭವ ಆಗುವುದು ಬೇಡ ಎಂದು ಹೇಳಿಕೆ ನೀಡಿದ್ದಾಳೆ.