ನ್ಯೂಸ್

ರಾತ್ರಿ ಹೋಟೆಲಿಗೆ ಕರೆದಿದ್ದರು, ಏಳು ದಿನಗಳ ಕಾಲ ಹೊರಬರಲು ಆಗಿರಲಿಲ್ಲ; ಸೌತ್​ ಸಿನಿ ನಿರ್ದೇಶಕನ ಕುರಿತು ಶಾಕಿಂಗ್​ ಆರೋಪ ಮಾಡಿದ ಖ್ಯಾತ Actress

ಮುಂಬೈ: 2024ರಲ್ಲಿ ಸಖತ್​ ಸೌಂಡ್​ ಮಾಡಿದ್ದ ಜಸ್ಟಿಸ್​ ಹೇಮಾ ಸಮಿತಿ ವರದಿ ಕೇರಳ ಸರ್ಕಾರಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಮಾಲಿವುಡ್​ ಮಾತ್ರವಲ್ಲದೇ ಬೇರೆ ಚಿತ್ರರಂಗದ ನಟಿಯರು (Actress) ತಾವು ಅನುಭವಿಸಿದ್ದ ಕಿರುಕುಳ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಬಾಲಿವುಡ್​ನ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟಿ ಉಪಾಸನಾ ಸಿಂಗ್​ (Actress Upasana) ಸೌತ್​ ಸಿನಿ ಇಂಡಸ್ಟ್ರಿಯ ನಿರ್ದೇಶಕರೊಬ್ಬರು ತಮ್ಮ ಜೊತೆ ನಡೆದುಕೊಂಡ ರೀತಿಯನ್ನು ವಿವರಿಸಿದ್ದು, ಸದ್ಯ ವೈರಲ್​ ಆಗುತ್ತಿದೆ.

ಸಿದ್ಧಾರ್ಥ್ ಕಾನನ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಉಪಾಸನಾ (Actress Upasana), ಅನಿಲ್​ ಕಪೂರ್​ ನಾಯಕರಾಗಿ ನಟಿಸುತ್ತಿದ್ದ ಸಿನಿಮಾಗೆ ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ನಿರ್ದೇಶಕರೊಬ್ಬರು ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ನಾನು ನಿರ್ದೇಶಕರ ಕಚೇರಿಗೆ ಭೇಟಿ ನೀಡಿದಾಗಲೆಲ್ಲ ನನ್ನ ತಾಯಿ ಅಥವಾ ಸಹೋದರಿಯನ್ನು ಕರೆದುಕೊಂಡು ಹೋಗುತ್ತಿದ್ದೆ. ಆ ಬಳಿಕ ಮುಂದೊಂದು ದಿನ ರಾತ್ರಿ 11:30ಕ್ಕೆ ಕರೆ ಮಾಡಿ ಮಾತನಾಡುವುದಿದೆ ಎಂದು ಹೋಟೆಲ್​ಗೆ ಬನ್ನಿ ಎಂದು ಹೇಳಿದ್ದರು. ನನ್ನ ಬಳಿ ಕಾರಿಲ್ಲದ ಕಾರಣ ಬರಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೆ. 

ಆ ಬಳಿಕ ನಿರ್ದೇಶಕರು ನಾನು ಹೇಳಿದ್ದು, ಕಥೆಯ ವಿಚಾರಕ್ಕೆ ಮಾತನಾಡುವುದಲ್ಲ. ಬದಲಿಗೆ ಇದು ಬೇರೆ ರೀತಿಯ ಸಿಟ್ಟಿಂಗ್​ ಎಂದು ಹೇಳಿದರು. ನಾನು ಇದಕ್ಕೆ ಒಪ್ಪಲಿಲ್ಲ. ಮಾರನೆಯ ದಿನ ಬೆಳಗ್ಗೆ ಬಾಂದ್ರಾದಲ್ಲಿರುವ ಅವರ ಕಚೇರಿಗೆ ಹೋಗಿ ಪಂಜಾಬಿಯಲ್ಲಿ ಬೈದು ಬಂದೆ. ನಾನು ಜನರ ಬಳಿ ಅನಿಲ್​ ಕಪೂರ್​ರೊಂದಿಗೆ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದೆ. ಆ ಬಳಿಕ ಈ ವಿಚಾರ ನನ್ನ ತಲೆಗೆ ಬಂದಿತು. ಮನಸ್ಸಿಗೆ ತುಂಬಾ ಬೇಜಾರಾಗಿ ಏಳು ದಿನಗಳ ಕಾಲ ರೂಮಿನಿಂದ ಹೊರಬಂದಿರಲಿಲ್ಲ. ನನ್ನ ತಾಯಿ ತುಂಬಾ ಸಪೋರ್ಟ್ ಮಾಡಿದರು. ಈ ಕಾರಣಕ್ಕೆ ನಾನು ಚಿತ್ರರಂಗವನ್ನು ಬಿಡದೆ ಇರಲು ನಿರ್ದರಿಸಿದೆ ಎಂದು ನಟಿ ಉಪಾಸನಾ (Actress Upasana) ಹೇಳಿದ್ದಾರೆ.