ನ್ಯೂಸ್

ಬಿಗ್​​ಬಾಸ್ ದಸರಾ ದರ್ಬಾರಲ್ಲಿ ನಟಿ ತಾರಾ; ಸ್ಪರ್ಧಿನಾ? ಅತಿಥಿನಾ..ಎಂದು ಪ್ರಶ್ನೆ ಮಾಡಿದ ವೀಕ್ಷಕರು

ಬೆಂಗಳೂರು: ಬಿಗ್​​ಬಾಸ್ ಮನೆಯ ಸ್ಪರ್ಧಿಗಳು ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ವರ್ತೂರು ಸಂತೋಷ್ ಅವರು ಏಕಾಏಕಿ ಎಗ್ಸಿಟ್ ಆಗಿದ್ದು ಮನೆಯವರಿಗೆ ಶಾಕಿಂಗ್ ಎನಿಸಿದೆ. ಆದರೆ ಇತ್ತ  ದೊಡ್ಮನೆಗೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲರೂ ಹೊಸಬಟ್ಟೆ ಧರಿಸಿ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಈ ವಿಶೇಷ ದಿನಕ್ಕೆ ತಾರಾ ಅವರು ಕೂಡ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್​​ಬಾಸ್​ಗೆ ಮನೆಗೆ ಬಂದರು. ಅವರ ಆಗಮನದಿಂದ ಎಲ್ಲರಿಗೂ ಖುಷಿ ಆಗು ಕುಣಿದು ಕುಪ್ಪಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಆಚರಣೆ ಇತ್ತು. ಈ ಕಾರಣಕ್ಕೆ ತಾರಾ ಅವರು ಮನೆಗೆ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅತಿಥಿನಾ? ಸ್ಪರ್ಧಿನಾ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.  ಇಂದಿನ ಸಂಚಿಕೆಯಲ್ಲಿ ಈ ಎಪಿಸೋಡ್​ ನಲ್ಲಿ​​ ಪ್ರಕಟವಾಗಲಿದೆ.

ತಾರಾ ಅವರು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ರಾಜ ರಾಣಿ’ ಹಾಗೂ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದರು. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ.

ಮನೆಯಲ್ಲಿರುವ ಸಸ್ಪರ್ಧಿಗಳ ಮಧ್ಯೆ ಮುನಿಸು, ಜಗಳ, ಗೇಮ್​ ಕಾವು ಜೊರಾಗಿದೆ. ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಆಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡುವುದನ್ನು ನೋಡಲು ಇಂದು ಸಂಜೆವರೆಗೆ ಕಾಯಬೇಕಾಗಿದೆ.