ನ್ಯೂಸ್

ಯಾವಾಗ ಮದುವೆ? ಅಭಿಮಾನಿ ಪ್ರಶ್ನೆಗೆ ಕೋಪಗೊಂಡ ತಮನ್ನಾ

ಬಹುಭಾಷಾ ನಟಿ ತಮನ್ನಾ ಭಾಟಿಯ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಡೇಟ್ ಮಾಡುತ್ತಿರುವ ವಿಷಯ ಗೊತ್ತಿದೆ. ಕೆಲವು ತಿಂಗಳ ಹಿಂದಷ್ಟೆ ಈ ವಿಷಯದ ಬಗ್ಗೆ ಮೌನ ಮುರಿದು, ಇಬ್ಬರೂ ರಿಲೇಷನ್‌ಶಿಪ್‌ನಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇಬ್ಬರೂ ಮಾಲ್ಡೀವ್ಸ್‌ನಲ್ಲ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದ ಫೋಟೋ ಕೂಡ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹೀಗಾಗಿ ಅಭಿಮಾನಿಗಳಿಗೆ ಇವರಿಬ್ಬರು ಯಾವಾಗ ಮದುವೆ ಆಗಬಹುದು ಎಂಬ ಸಹಜ ಕುತೂಹಲ ಮೂಡಿದೆ. ಆದರೆ, ಈ ಹಿಂದೆ ತಮನ್ನಾ, ‘ಮದುವೆ ಪಾರ್ಟಿ ಇದ್ದ ಹಾಗಲ್ಲ. ದೊಡ್ಡ ಜವಾಬ್ದಾರಿ. ಅದನ್ನು ಸ್ವೀಕರಸಲು ತಯಾರಿದ್ದಾಗ ಮಾತ್ರ ಮದುವೆ ಅಗಬೇಕು. ವಯಸ್ಸಾಗುತ್ತಿದೆ ಅಥವಾ ಎಲ್ಲರೂ ಮದುವೆ ಆಗುತ್ತಿದ್ದಾರೆ ಎಂಬ ಕಾರಣಕ್ಕೆ ಮದುವೆ ಆಗಬಾರದು’ ಎಂದು ಅಭಿಪ್ರಾಯಪಟ್ಟಿದ್ದರು. ಇತ್ತಿಚೆಗೆ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಟಿಗೆ ಮತ್ತೊಮ್ಮೆ ಅಭಿಮಾನಿಯೊಬ್ಬರು ‘ಯಾವಾಗ ಮದುವೆ? ಹುಡುಗ ಸಿಕ್ಕಿದ್ದಾರ?’ ಎಂದು ಪ್ರಶ್ನಿಸಿದ್ದು, ಅದಕ್ಕೆ ತಮನ್ನಾ ಕೋಪಗೊಂಡಿದ್ದಾರೆ.

‘ನನ್ನ ತಂದೆ, ತಾಯಿ ಕೂಡ ಈ ರೀತಿಯ ಪ್ರಶ್ನೆ ಕೇಳುವುದಿಲ್ಲ. ಸದ್ಯಕ್ಕೆ ಜೀವನದಲ್ಲಿ ತುಂಬಾ ಖುಷಿಯಿಂದ ಇದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ತಮನ್ನಾ ಮಾಲಿವುಡ್‌ನಲ್ಲಿ ‘ಬಾಂದ್ರ’, ತಮಿಳಿನ ‘ಅರನ್‌ಮನೈ 4’ ಹಾಗೂ ಹಿಂದಿಯಲ್ಲಿ ‘ವೇದಾ’ ಸಿನಿಮಾಗಳಲ್ಲಿ ಬಿಜಿಯಿದ್ದಾರೆ.
-ಏಜೆನ್ಸಿಸ್