ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಕುರಿತಾಗಿ ಬಾಲಿವುಡ್ ನಟಿ ಸನ್ನಿಲಿಯೋನ್ ಕೂಡಾ ಗರಂ ಆಗಿದ್ದಾರೆ.
ಸಿಲಿಕಾನ್ ಸಿಟಿಗೆ ನಟಿ ಸನ್ನಿ ಲಿಯೋನ್ ಹೆಚ್.ಆರ್.ಬಿ.ಆರ್ ಲೇಔಟ್‌ನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ನ್ಯಾಚುರಲ್ಸ್ನ ಬ್ಯೂಟಿ ಆ್ಯಂಡ್ ಎಕ್ಸ್ಪಿರಿಯನ್ಸ್ ಉದ್ಘಾಟನೆಗಾಗಿ ಪತಿ ಡೇನಿಯಲ್ ವೇಬರ್ ಜತೆ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರು ದರ್ಶನ್ ಅರೆಸ್ಟ್ ಬಗ್ಗೆ ಕೇಳಿದಾಗ, ಬಳಿಕ ಸ್ವಲ್ಪ ಗರಂ ಆಗಿ ಇದು ತುಂಬಾ ಕಷ್ಟವಾದ ಪ್ರಶ್ನೆ ಆಗಿದೆ. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು ಸನ್ನಿ ಕೊಂಚ ಗರಂ ಆದರು.
ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಬೆಂಗಳೂರು ಎಂದು ಜೋರಾಗಿ ಹೇಳಿದರು. ನನಗೆ ಸ್ಪಲ್ಪ ಸ್ವಲ್ಪ ಕನ್ನಡ ಬರುತ್ತದೆ. ಇನ್ನು ಕಲಿಯುತ್ತೇನೆ ಎಂದು ಹೇಳಿದ್ದಾರೆ.
ಸನ್ನಿ ಲಿಯೋನ್ ಕಾರ್‌ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಶಿಳ್ಳೆ, ಚಪ್ಪಾಳೆ ಹಾಕುತ್ತಾ ಮಾದಕ ಚೆಲುವೆಯನ್ನು ಸಿಲಿಕಾನ್ ಸಿಟಿಗೆ ಸ್ವಾಗತಿಸಿಕೊಂಡರು. ದೂರದಿಂದಲೇ ಸನ್ನಿ ಫೋಟೋ ಸೆರೆ ಹಿಡಿದು, ಅಲ್ಲಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಒಳಗೊಳಗೆ ಖುಷಿಯಿಂದ ಕುಣಿದಾಡಿದರು.