ನ್ಯೂಸ್

ದರ್ಶನ್ ಬಿಗ್​ ಸೀಕ್ರೆಟ್ ರಿವೀಲ್ ಮಾಡಿದ ನಟಿ ಶ್ರುತಿ! ವಿಡಿಯೋ ನೋಡಿ

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್​ ಮತ್ತು ನಟಿ ಆರಾಧನಾ ರಾಮ್​ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಕಾಟೇರ' ಚಿತ್ರದ ಎರಡನೇ ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಕಲಾವಿದರು, ಹಲವು ಸಂಗತಿಗಳನ್ನು ಹಂಚಿಕೊಂಡರು. ಇದೇ ವೇಳೆ ಸಿನಿಮಾ ಕುರಿತಂತೆ ಕೆಲವು ಮಾಹಿತಿಯನ್ನು ತಿಳಿಸಿದ ಹಿರಿಯ ನಟಿ ಶ್ರುತಿ, ನಟ ದರ್ಶನ್ ಅವರ ಬಿಗ್​ ಸೀಕ್ರೆಟ್​ವೊಂದನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.

"ಇದು ನನ್ನ ಮೊದಲ ಪ್ರೆಸ್​ಮೀಟ್​, ಹಾಗಾಗಿ ಒಂದೆರೆಡು ನಿಮಿಷ ಹೆಚ್ಚಿಗೆ ತೆಗೆದುಕೊಳ್ಳುತ್ತೀನಿ. ಇವರೆಲ್ಲಾ ಉಸಿರಾಡುತ್ತಿರುವುದು ಸಿನಿಮಾಗಾಗಿ, ಚಿತ್ರವನ್ನು ಪ್ರೀತಿಸುವವರೆಲ್ಲರೂ ಇಂದು ಒಂದೇ ವೇದಿಕೆಯಲ್ಲಿ ಕುಳಿತ್ತಿದ್ದಾರೆ. ಇಂತಹ ಒಂದು ತಂಡದಿಂದ ಒಂದು ಚಿತ್ರ ಬಂದಿದೆ ಅಂದ್ರೆ, ಬಹುಶಃ ಸಿನಿಮಾವನ್ನು ಜನರು ಎಷ್ಟು ಪ್ರೀತಿಸಬಹುದು ಎಂಬ ನಿರೀಕ್ಷೆ ನನ್ನಲ್ಲೂ ಮೂಡಿದೆ" ಎಂದು ಶ್ರುತಿ ಹೇಳಿದರು.

"ಕಾಟೇರ ಟೈಟಲ್​ ಕೇಳುತ್ತಿದ್ದಂತೆ ನಮಗೆಲ್ಲಾ ಒಂದು ಕುತೂಹಲ ಮೂಡಿತ್ತು. ಇಷ್ಟು ದಿನಗಳ ಕಾಲ ಹಳ್ಳಿ ಚಿತ್ರಗಳನ್ನು ಮಾಡಿದ್ದೇನೆ. ನಾನು ನಟಿಸಿರುವ ನೂರಾರು ಸಿನಿಮಾಗಳು ಹಳ್ಳಿ ಸೊಗಡಿನ, ನಮ್ಮ ನಾಡಿನ, ಮಣ್ಣಿನ ಚಿತ್ರಗಳೇ, ಆದ್ರೂ ಕೂಡ ಎಲ್ಲಿಯೂ ನಾವು ಈ ಹೆಸರು, ಪದ ಕೇಳಲೇ ಇಲ್ವಾ? ನಮ್ಮ ಕಿವಿಗೆ ಬೀಳಲಿಲ್ವಾ? ಅದೇ ನೋಡಿ".....ಮತ್ತಷ್ಟು ವಿಚಾರ ತಿಳಿಯಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.