ನ್ಯೂಸ್

ಸಹೋದರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ನಟಿ

ಮುಂಬೈ: ಪಂಜಾಬಿ ನಟಿ ಶೆಹನಾಜ್ ಗಿಲ್ ಅವರು ಹೊಚ್ಚಹೊಸ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಕಾರನ್ನು ತನ್ನ ಸಹೋದರನಿಗೆ ಉಡುಗೊರೆಯೊಂದಿಗೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ, ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಗಿಲ್ ಜತೆ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ಪಡೆದಿರುವುದನ್ನು ನೋಡಬಹುದಾಗಿದೆ. ಇವರು ಚಂಡೀಗಢದಲ್ಲಿರುವ Mercedes-Benz ಡೀಲರ್‌ಶಿಪ್‌ನಲ್ಲಿ ಈ ಐಷಾರಾಮಿ ಕಾರನ್ನು ಪಡೆದುಕೊಂಡರು. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಶಹಬಾಜ್ ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ರೀಲ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ತೆಗೆದುಕೊಳ್ಳುವ ದೃಶ್ಯವನ್ನು ತೋರಿಸಿದೆ. ಇನ್ನು ಶಹಬಾಜ್ ಗಿಲ್ ತಮ್ಮ ಸಹೋದಿರಿ ಶೆಹನಾಜ್ ಗಿಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಶೆಹಬಾಜ್ ತನ್ನ ಹೊಸ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್‌ನೊಂದಿಗೆ ಪೋಸ್ ನೀಡಿದ ಕ್ಲಿಪ್‌ಗಳನ್ನು ಸಹ ವೀಡಿಯೊದಲ್ಲಿ ಒಳಗೊಂಡಿದೆ.

ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ಭಾರತದಲ್ಲಿ 2023ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದು E 200 ಎಕ್ಸ್‌ಕ್ಲೂಸಿವ್ ಪೆಟ್ರೋಲ್, E 220d ಎಕ್ಸ್‌ಕ್ಲೂಸಿವ್ ಡೀಸೆಲ್ ಮತ್ತು E 350d AMG ಲೈನ್ ಡೀಸೆಲ್ ಆಗಿದೆ. ಡೆಲಿವರಿ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಆವೃತ್ತಿಯು AMG ಲೈನ್ ಕಿಟ್‌ನೊಂದಿಗೆ ಸಜ್ಜುಗೊಂಡಿದೆ.