ನ್ಯೂಸ್

ಶರಣ್ಯಾ ಸಂಭ್ರಮ: ದಸರಾ ಹಬ್ಬದ ಆಚರಣೆಯ ಡಬಲ್ ಖುಷಿ

ಬೆಂಗಳೂರು: ಕನ್ನಡದ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ ಶರಣ್ಯಾ ಶೆಟ್ಟಿ ಬಳಿಕ ಬೆಳ್ಳಿತೆರೆಯಲ್ಲಿ ನಾಯಕಿಯಾದವರು. ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಿಜಿಯಾಗಿರುವ ಅವರು ‘1980’, ‘ಡಿಯರ್ ಲವ್’, ‘ಸ್ಪೂಕಿ ಕಾಲೇಜ್’, ‘ನಗುವಿನ ಹೂಗಳ ಮೇಲೆ’ ಹಾಗೂ ಇತ್ತೀಚೆಗೆ ತೆರೆಕಂಡ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಮಧ್ಯೆ ‘ಕೃಷ್ಣಂ ಪ್ರಣಯ ಸಖಿ’ 50 ಯಶಸ್ವಿ ದಿನಗಳನ್ನು ಪೂರೈಸಿರುವುದು ಹಾಗೂ ದಸರಾದ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ನಟಿಗೆ ಹಬ್ಬದ ಡಬಲ್ ಖುಷಿ ನೀಡಿದೆ. ಇದೇ ಸಡಗರದಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ಮೊದಲು ನವರಾತ್ರಿ ಸಮಯದಲ್ಲಿ ಅಮ್ಮ ಪೂಜೆ ಮಾಡುತ್ತಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ನಾನೇ ಪೂಜೆ ಮಾಡುತ್ತಿದ್ದೇನೆ. ಈ ದಿನಗಳಲ್ಲಿ ನಾನ್‌ವೆಜ್ ತಿನ್ನುವುದಿಲ್ಲ. ಪ್ರತಿ ದಿನ ದೇವಿ ಪೂಜೆ ಮಾಡಿ, ಆ ದಿನದ ವಿಶೇಷ ತಿಳಿದುಕೊಳ್ಳುತ್ತಿದ್ದೆ. ಆದರೆ, ಈ ಬಾರಿ ಕೆಲಸ ಹಾಗೂ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸದಲ್ಲಿದ್ದೇನೆ. ಹೀಗಾಗಿ ವ್ರತಾಚರಣೆ ಮಾಡುತ್ತಿಲ್ಲ. ಆದರೆ, ಎಲ್ಲೇ ಇರಲಿ ಹಬ್ಬವನ್ನು ಆಚರಿಸುತ್ತೇನೆ. ಮೊದಲ ದಿನ ಬೆಳಗಾವಿಯಲ್ಲಿದ್ದೆ ಅಲ್ಲಿಯೇ ದೇವಿಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದೆ. ಎರಡನೇ ದಿನ ಬಳ್ಳಾರಿ, ಮೂರನೇ ದಿನ ಬೀದರ್, ನಾಲ್ಕನೇ ದಿನ ಮೈಸೂರು ಹಾಗೂ ಐದನೇ ದಿನ ಕೋಲಾರದಲ್ಲಿದ್ದರೂ ಆ ಊರಿನ ದೇವಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದೇನೆ. ಕೆಲಸದ ಜತೆ ಜತೆಗೆ ಟೆಂಪಲ್ ರನ್ ಮಾಡುತ್ತಿರುವುದು ಖುಷಿ ನೀಡಿದೆ’ ಎನ್ನುತ್ತಾರೆ ಶರಣ್ಯಾ.

ದೇವಿ ಮಹಾತ್ಮೆ ಪಠಣ: ಶರಣ್ಯಾ ನವರಾತ್ರಿ ಸಮಯದಲ್ಲಿ ದೇವಿ ಮಹಾತ್ಮೆಯ ಶ್ಲೋಕಗಳನ್ನು ಪಠಣ ಮಾಡುತ್ತಾರಂತೆ. ಈ ಬಗ್ಗೆ, ‘ಹಬ್ಬದ ಸಮಯದಲ್ಲಿ ದೀಪ ಬೆಳಗಿಸಿ, ಶ್ಲೋಕಗಳನ್ನು ಪಠಿಸುತ್ತೇನೆ. ಆ ಮೂಲಕ ಆಚರಣೆಯ ಹಿನ್ನೆಲೆ, ದೇವಿಯ ಮಹಾತ್ಮೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಇನ್ನು, ಪ್ರತಿ ಹಬ್ಬಕ್ಕೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ನವರಾತ್ರಿ ಮಹಿಳೆಯರಿಗೆಂದೇ ಮೀಸಲಾಗಿರುವ ಹಬ್ಬ. ಹೆಣ್ಣಿನ ಶಕ್ತಿಯನ್ನು ಅರಿಯಲು ಈ ಆಚರಣೆ ಪೂರಕವಾಗಿದೆ. ನಮ್ಮ ನಾಡಹಬ್ಬದ ಮೂಲಕ ಹೆಣ್ಣನ್ನು ಗೌರವಿಸುತ್ತಾರೆ ಎಂದರೆ ಪ್ರತಿಯೊಬ್ಬ ಮಹಿಳೆಗೂ ಹೆಮ್ಮೆಯ ವಿಷಯ’ ಎನ್ನುತ್ತಾರೆ.

ದಸರಾ ಚಲನಚಿತ್ರೋತ್ಸವ ಉದ್ಘಾಟನೆ: ನಟಿ ಶರಣ್ಯಾ ಹಂತ ಹಂತವಾಗಿ ಬೆಳೆಯಲು ಮೈಸೂರು ದಸರಾ ಕೂಡ ವೇದಿಕೆಯಾಗಿದೆ. 15 ವರ್ಷದವಳಿರುವಾಗ ಮೊದಲ ಬಾರಿಗೆ ರ‌್ಯಾಂಪ್‌ವಾಕ್ ಮಾಡಿದ್ದ ಅವರು, ಈ ಬಾರಿಯ ‘ದಸರಾ ಚಲನಚಿತ್ರೋತ್ಸವವನ್ನು’ ಉದ್ಘಾಟಿಸುವ ಹಂತಕ್ಕೆ ಬೆಳೆದಿದ್ದಾರೆ. ‘ನಾನು 15 ವರ್ಷದವಳಿರುವಾಗ ಯುವ ದಸರಾದಲ್ಲಿ ಮಾಡೆಲಿಂಗ್ ಮಾಡಿದ್ದೆ. ಬಳಿಕ ಜೂನಿಯರ್ ಆರ್ಟಿಸ್ಟ್ ಆಗಿ ಡಾನ್ಸ್ ಮಾಡಿದ್ದೆ, ಬಳಿಕ ನಟಿಯಾದ ಮೇಲೆ ಒಮ್ಮೆ ನೃತ್ಯ ಪ್ರದರ್ಶಿಸಿದ್ದೆ. ಈ ಬಾರಿ ದಸರಾ ಚಲನಚಿತ್ರೋತ್ಸವದ ಉದ್ಘಾಟಕರಲ್ಲಿ ನಾನು ಒಬ್ಬಳು. ಇದು ನನ್ನ ವೃತ್ತಿ ಜೀವನದ ಧನ್ಯತೆಯ ಕ್ಷಣ. ಈ ಹಂತಕ್ಕೆ ಬೆಳೆದಿದ್ದೇನೆ ಎಂದರೆ ಅದು ತಾಯಿ ಚಾಮುಂಡೇಶ್ವರಿ ಆಶೀರ್ವಾದ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಶರಣ್ಯಾ.

ವಿಭಿನ್ನ ಕಥೆಗೆ ಹುಡುಕಾಟ: ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಟಿ ಶರಣ್ಯಾ 30ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದಾರಂತೆ. ‘ಸದ್ಯ ‘ಾರೆಸ್ಟ್’ನಲ್ಲಿ ನಟಿಸುತ್ತಿದ್ದೇನೆ. ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಸದ್ಯ ಎರಡು, ಮೂರು ಕಥೆಗಳನ್ನು ಓಕೆ ಮಾಡಿದ್ದು, ಹಬ್ಬದ ಬಳಿಕ ೈನಲ್ ಮಾಡಬೇಕಿದೆ’ ಎನ್ನುತ್ತಾರೆ ಶರಣ್ಯಾ.