ನ್ಯೂಸ್

ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್​​ವುಡ್​ ಡ್ರಗ್ಸ್​ ಜಾಲ ನಂಟು ಪ್ರಕರಣದಲ್ಲಿ ಸಿಲುಕಿರುವ ನಟಿ ಸಂಜನಾ ಗಲ್ರಾನಿ ಕೂದಲು ಪರೀಕ್ಷೆಯಿಂದ ಡ್ರಗ್ಸ್​ ಸೇವನೆ ಖಚಿತವಾದ ಬೆನ್ನಲ್ಲೇ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನು ತಿಳಿಸಿರುವ ಸಂಜನಾ ತಾಯಿ ರೇಷ್ಮಾ ಗಲ್ರಾನಿ, ಸದ್ಯ ಆಕೆ ಈ ಕೇಸಿನಿಂದ ಡಿಸ್ಟರ್ಬ್ ಆಗಿದ್ದಾಳೆ.. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್​ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದಿದ್ದಾರೆ.

ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದ್ರೆ ದುರಾದೃಷ್ಟದಿಂದ ಈ ತರ ಎಲ್ಲಾ ಆಗ್ತಿದೆ. ಆದ್ರೆ ನಾವು ಭಗವಾನನ್ನ ನಂಬ್ತೀವಿ ಎಂದ ರೇಷ್ಮಾ ಅವರು, ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡ್ತೀದೀವಿ. ಅವಳಿಗೆ ಹುಷಾರಿಲ್ಲದ ಕಾರಣ ನಂಗೆ ಊಟ ನೀಡೋಕೆ ಹೇಳಿದ್ಳು. ಒಂದು ಹುಡುಗಿ ಆಗಿ ಒಳ್ಳೇ ಕೆಲಸ ಮಾಡ್ತಿದ್ದಾಳೆ. ಎಲ್ಲಾ ನಮ್ಮ ಡೆಸ್ಟಿನಿ ಎಂದಿದ್ದಾರೆ.

ಸಂಜನಾಗೆ ಹುಷಾರಿಲ್ಲ ಬೇಜಾರನಲ್ಲಿ ಇದ್ದೇವೆ. ಅವಳಿಗೆ ಅಟ್ಯಾಕ್​​ ತರಾ ಆಗ್ತಿದೆ. ತುಂಬಾ ಡಿಪ್ರೆಸ್ ಆಗಿದ್ದಾರೆ. ಎಲ್ಲರೂ ಸರ್ಪೋಟ್ ಮಾಡಿ. ತಾಯಿಯಾಗಿ ದೇವರನ್ನು ಪ್ರೇಯರ್ ಮಾಡ್ತೇನೆ ಎಂದು ಸಂಜನಾ ತಾಯಿ ಭಾವುಕರಾಗಿ ನುಡಿದಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾದ ಸಂಜನಾ, ಮೂರು ಗಂಟೆಗಳ ಮುಂಚೆ ಕೂಡ ಇನ್​​ಸ್ಟಾಗ್ರಾಂನಲ್ಲಿ ರೀಲ್ ಪೋಸ್ಟ್​ ಮಾಡಿದ್ದಾರೆ. ವಿಡಿಯೋ ಮಾಡೋದೇ ನನ್ನ ಕೆಲಸ.. ದಯವಿಟ್ಟು ಟ್ರೋಲ್ ಮಾಡಬೇಡಿ. ನನ್ನ ಪೋಸ್ಟ್​ ಅಥವಾ ಪರ್ಸನಾಲಿಟಿ ಇಷ್ಟ ಆಗದಿದ್ರೆ ಅನ್​ಫಾಲೋ ಮಾಡಿ ಎಂದಿದ್ದಾರೆ.