ನ್ಯೂಸ್

ಮಯೋಸಿಟಿಸ್‌ ಖಾಯಿಲೆಯ ಚಿಕಿತ್ಸೆಗೆ ಸಮಂತಾ ಈ ನಟನಿಂದ 25 ಕೋಟಿ ರೂ. ಪಡೆದಿದ್ದರು ಎಂಬ ವದಂತಿ; ಪ್ರತಿಕ್ರಿಯೆ ಕೊಟ್ಟ ನಟಿ

ಆಂಧ್ರಪ್ರದೇಶ: ಕಳೆದ ಕೆಲವು ದಿನಗಳಿಂದ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತಾ ಅವರ ಬಗ್ಗೆ ವ್ಯಾಪಕವಾಗಿ ವದಂತಿಗಳು ಹರಿದಾಡುತ್ತಿದ್ದು, ಸ್ಟಾರ್ ಹಿರೋಯಿನ್​ ತಮಗೆ ಒದಗಿರುವ ಮಯೋಸಿಟಿಸ್ ಖಾಯಿಲೆಯ ಚಿಕಿತ್ಸೆಗೆ ಖ್ಯಾತ ತೆಲುಗು ನಟರೊಬ್ಬರಿಂದ ಬರೋಬ್ಬರಿ 25 ಕೋಟಿ ರೂ.ಗಳನ್ನು ಪಡೆಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ನಟಿಯನ್ನು ಕೆರಳಿಸಿದ್ದು, ಇದಕ್ಕೆ ತಮ್ಮ ಶೈಲಿಯಲ್ಲೇ ಇದೀಗ ಉತ್ತರಿಸಿದ್ದಾರೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಸಮಂತಾ, “ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ? ಯಾರೋ ನಿಮಗೆ ಕೆಟ್ಟ ಡೀಲ್​ ಅನ್ನು ನೀಡಿದ್ದಾರೆ. ನಾನು ಅದರ ಸಣ್ಣ ಭಾಗದಷ್ಟು ಮಾತ್ರ ನನ್ನ ಖಾಯಿಲೆಗೆ ಖರ್ಚು ಮಾಡುತ್ತಿದ್ದೇನೆ ಎಂಬುದು ನನಗೆ ಖುಷಿಯಾಗಿದೆ. ನನ್ನನ್ನು ನಾನು ಸುಲಭವಾಗಿ ನೋಡಿಕೊಳ್ಳಬಹುದು, ಧನ್ಯವಾದ" ಎಂದು ಹೇಳಿದ್ದಾರೆ.

"ಮಯೋಸಿಟಿಸ್ ಸಾವಿರಾರು ಜನರು ಅನುಭವಿಸುವ ಖಾಯಿಲೆಯಾಗಿರುವುದರಿಂದ ಇಂತಹ ಮಾಹಿತಿಯನ್ನು ಹರಡುವ ಮೊದಲು ಮಾಧ್ಯಮ ಪೋರ್ಟಲ್‌ಗಳು ಜವಾಬ್ದಾರರಾಗಿರಬೇಕೆಂದು" ಸಮಂತಾ ಮನವಿ ಮಾಡಿದರು. ಸದ್ಯ ಇದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ. ಈ ಮುಖೇನ ವದಂತಿಗಳಿಗೆ ತೆರೆ ಎಳೆದಿದ್ದಾರೆ,(ಏಜೆನ್ಸೀಸ್).