ನ್ಯೂಸ್

ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್; ಬಣ್ಣದ ಲೋಕಕ್ಕೆ ಬೈ ಬೈ ಹೇಳಿ..ಈಗ ಎಷ್ಟು ಬದಲಾಗಿದ್ದಾರೆ ನೋಡಿ...

ಬೆಂಗಳೂರು:  ಇಂಡಸ್ಟ್ರಿಯಲ್ಲಿ ಕೆಲವು ಹೀರೋಯಿನ್​​ಗಳ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸುತ್ತವೆ. ಅಂಥ ನಾಯಕಿಯರಲ್ಲಿ ಒಬ್ಬರು ಸಾಕ್ಷಿ ಶಿವಾನಂದ್. ತನ್ನ ಸುಂದರ ನೋಟ, ಸುಂದರ ನಗು ಮತ್ತು ಉತ್ತಮ ದೃಢತೆಯೊಂದಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನನ್ನು ತಾನು  ತೊಡಗಿಸಿಕೊಂಡ ನಟಿಯರ ಸಾಲಿನಲ್ಲಿ ಸಾಕ್ಷಿ ಶಿವಾನಂದ್​​ ಕೂಡ ಒಬ್ಬರಾಗಿದ್ದಾರೆ.

1993 ರಲ್ಲಿ ಟಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದರು. 90ರ ದಶಕದಲ್ಲಿ ತಮ್ಮ ಸಿನಿಮಾಗಳಿಂದ ಧೂಳೆಬ್ಬಿಸಿದ ಸ್ಟಾರ್ ಹೀರೋಯಿನ್. ಆಗಿನ ಹುಡುಗರಿಗೆ ಅವಳು ಮನ ಮೋಹವಾಗಿದ್ದಳು.   ಜಸ್ಟ್ ಫಾರ್ ಚೇಂಜ್‌ಗಾಗಿ ಮಲಯಾಳಂ ಮತ್ತು ಹಿಂದಿ, ಕನ್ನಡ ಚಲನಚಿತ್ರವನ್ನು ಮಾಡಿದ ನಂತರ, ಮಲಯಾಳಂನಲ್ಲಿ ಮಮ್ಮೂಟ್ಟಿ ಹಾಗೂ ತೆಲುಗಿನಲ್ಲಿ ಚಿರಂಜೀವಿ ಅವರಂತಹ ಸ್ಟಾರ್ ನಟರಿಗೆ ನಾಯಕಿಯಾದ ಮೇಲೆ ಅವರ ಅದೃಷ್ಟವೇ ತಿರುಗಿತು.

ಕನ್ನಡದಲ್ಲಿ ‘ಗಲಾಟೆ ಅಳಿಯಂದಿರು’,  ‘ಕೋದಂಡ ರಾಮ' , ‘ನಾನು ನಾನೇ’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ  ಸಾಕ್ಷಿ ಶಿವಾನಂದ್ ಕಾಣಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ನಟಿ. ಮುಂಬೈ ಮೂಲದ ಈ ನಟಿಗೆ ಒಂದು ಕಾಲದಲ್ಲಿ ಎಲ್ಲಿಲ್ಲದ ಬೇಡಿಕೆ. ಆದರೆ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಹಾಗೂ ಪ್ರಖ್ಯಾತಿಯನ್ನು ಗಳಿಸಿ ಯಶಸ್ಸಿನ ಉತ್ತುಂಗಕ್ಕೆ ಹೋಗಿದ್ದ ಸಾಕ್ಷಿ ಶಿವಾನಂದ್ ಅವರ ವೈಯಕ್ತಿಕ ಬದುಕು ಮಾತ್ರ ಸ್ವಲ್ಪವೂ ಚೆನ್ನಾಗಿರಲಿಲ್ಲ.

ಸಾಕ್ಷಿ ಶಿವಾನಂದ ಅವರ ಸಹೋದರಿ ಶಿಲ್ಪಾ ಆನಂದ್ ಅವರೊಂದಿಗೆ ಕೆಲವೊಂದು ವಿಚಾರಕ್ಕೆ ಮುನಿಸಿಕೊಂಡು ಅಕ್ಕ ತಂಗಿ ನಡುವಿನ ಗಲಾಟೆ ಪೊಲೀಸ್ ಸ್ಟೇಷನ್  ಮೆಟ್ಟಿಲೇರಿ ದೂರು ದಾಖಲಾಗುವ ಮಟ್ಟಿಗೆ ಹೋಗುತ್ತದೆ.  ಕೆಲವು ವಿಚಾರಗಳು ಸಾಕ್ಷಿ ಶಿವಾನಂದ್ ಅವರನ್ನು ಸಿನಿಮಾರಂಗದಿಂದ ದೂರ ಉಳಿಯುವಂತೆ ಮಾಡುತ್ತದೆ. ನಂತರ ಸಾಕ್ಷಿ ಶಿವಾನಂದ್ ಅವರು ಯು.ಎಸ್ ಹೋದ ಸಂದರ್ಭದಲ್ಲಿ ಸಾಗರ್ ಎಂಬ ವ್ಯಕ್ತಿಯ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ.  2016 ರಲ್ಲಿ ಮದುವೆ ಆದರು ಎಂದು ಹೇಳಲಾಗುತ್ತದೆ. ಸಾಕ್ಷಿ ಅವರು ಮದುವೆಯಾದ ಬಳಿಕ ಅವರಿಗೆ ಎಲ್ಲವೂ ಚೆನ್ನಾಗಿರುತ್ತದೆ, ಆದರೆ ದಿನಗಳು ಕಳೆದಂತೆ ಗಂಡನ ಅಸಲಿ ಮುಖ ಗೋಚರಿಸಲು ಶುರುವಾಗುತ್ತದೆ. ಇದಾದನಂತರ ಸಾಕ್ಷಿ ಶಿವಾನಂದ್ ಅವರಿಗೆ ತಿಳಿಯುವುದು ತನ್ನ ಗಂಡ ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ ಅದರ ಬದಲು ನನ್ನ ಬಳಿ ಇರುವ ಹಣವನ್ನು ನೋಡಿ ಹಾಗೂ ಸೌಂದರ್ಯವನ್ನು ನೋಡಿ ಮದುವೆಯಾಗಿದ್ದಾರೆ ಎಂಬುದು ತಿಳಿಯುತ್ತದೆ. ಹೀಗೆ ಕೆಲವು ತಿಂಗಳು ಕಳೆದ ನಂತರ ಇವರಿಬ್ಬರೂ ಬೇರೆ ಬೇರೆಯಾಗುತ್ತಾರೆ, ವೈಯಕ್ತಿಕ ಬದುಕಿನಲ್ಲಿ ಆದ ಬದಲಾವಣೆಯಿಂದ ಸಾಕ್ಷಿಯವರು ಸಿನಿಮಾರಂಗದಲ್ಲೂ ಕೂಡ ಏಳುಬೀಳುಗಳು ಕಾಣಲು ಶುರುವಾಗುತ್ತದೆ. ಕೆಲವರು ಹೇಳುವ ಪ್ರಕಾರ ಅವರು ಒಂದು ಸಣ್ಣದಾದ ಕಂಪನಿಯನ್ನು ಪ್ರಾರಂಭ ಮಾಡಿ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು.

ಐದೇ ವರ್ಷದಲ್ಲಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ನಂತರ ಅವರು ಪಯಣ ಬೆಳೆಸಿದ್ದು ಕನ್ನಡದ ಕಡೆಗೆ. 2000ರಲ್ಲಿ ತೆರೆಕಂಡ ‘ಗಲಾಟೆ ಅಳಿಯಂದಿರು’ ಅವರ ಮೊದಲ ಕನ್ನಡ ಸಿನಿಮಾ. ಮೊದಲ ಸಿನಿಮಾವೇ ದೊಡ್ಡ ಹಿಟ್ ಆಯಿತು. 2002ರ ಒಂದೇ ವರ್ಷದಲ್ಲಿ ಉಪೇಂದ್ರ ಜೊತೆ ‘ನಾನು ನಾನೇ’, ಸಿ.ಪಿ. ಯೋಗೇಶ್ವರ್ ಅವರೊಂದಿಗೆ ‘ಸೈನಿಕ’ ಹಾಗೂ ರವಿಚಂದ್ರನ್ ಜೊತೆ ‘ಕೋದಂಡ ರಾಮ’ ಸಿನಿಮಾಗಳಲ್ಲಿ ಅವರು ನಟಿಸಿದರು. ಉಪೇಂದ್ರ ಜೊತೆ ಮತ್ತೊಮ್ಮೆ ‘ತಂದೆಗೆ ತಕ್ಕ ಮಗ’ ಸಿನಿಮಾದಲ್ಲಿ ನಟಿಸಿದ್ದ ಸಾಕ್ಷಿ, ‘ಸೌಂದರ್ಯ’ ಚಿತ್ರದಲ್ಲಿ ರಮೇಶ್‌ ಅರವಿಂದ್ ಜೊತೆಗೆ ಬಣ್ಣ ಹಚ್ಚಿದ್ದರು. 2014ರಲ್ಲಿ ತೆರೆಕಂಡ ಕನ್ನಡದ ‘ಪರಮಶಿವ’ ಚಿತ್ರವೇ ಕೊನೇ! ಅಲ್ಲಿಂದ ಬಣ್ಣದ ಲೋಕಕ್ಕೆ ಕಂಪ್ಲೀಟ್ ಆಗಿ ದೂರವಾದರು.