ಸಾಹಿಬಾ ಬಾಲಿ 
ನ್ಯೂಸ್

ಎಲ್ಲವನ್ನೂ ನಂಬಬೇಡಿ! : ಅರ್ಜುನ್ ಕಪೂರ್ ಜತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ನಟಿ ಸಾಹಿಬಾ ಬಾಲಿ

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ನಲ್ಲಿ ಸಾಹಿಬಾ ಬಾಲಿ ಜತೆ ಕಾಣಿಸಿಕೊಂಡ ಅರ್ಜುನ್ ಕಪೂರ್
  • ಇಬ್ಬರು ಸಂಬಂಧದಲ್ಲಿದ್ದಾರೆ ಎಂಬ ವದಂತಿ
  • ವದಂತಿಯನ್ನು ತಳ್ಳಿ ಹಾಕಿ, ಸ್ನೇಹಿತರಷ್ಟೆ ಎಂದು ತೇಪೆ ಹಚ್ಚಲು ಮುಂದಾದ ಸಾಹಿಬಾ ಬಾಲಿ
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಸಿನಿಮಾಗಳಿಗಿಂತ ಬೇರೆ ಕಾರಣಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಡೇಟಿಂಗ್, ಬ್ರೇಕಪ್, ರಿಲೇಷನ್‌ಶಿಪ್.. ವಿಚಾರಗಳಿಂದಾಗಿಯೇ ಅವರ ಹೆಸರು ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಇನ್ನು 2018ರಿಂದ ನಟಿ ಮಲೈಕಾ ಅರೋರಾ ಜತೆ ರಿಲೇಷನ್‌ಶಿಪ್‌ನಲ್ಲಿದ್ದ ಅರ್ಜುನ್ 2024ರಲ್ಲಿ ಬ್ರೇಕಪ್ ಮಾಡಿಕೊಂಡಿದ್ದರು. ಈ ಬ್ರೇಕಪ್ ಬಳಿಕ ಬಾಲಿವುಡ್ ನಟನ ಹೆಸರು ಹಲವು ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡಿದ್ದರೂ, ಅದು ಕೆಲ ದಿನಗಳಲ್ಲೇ ಹಿನ್ನೆಲೆಗೆ ಸರಿದುಬಿಡುತ್ತಿತ್ತು. ಇದೀಗ ಮತ್ತೊಬ್ಬ ನಟಿಯ ಜತೆಗೆ ಅರ್ಜುನ್ ಕಪೂರ್ ಹೆಸರು ಕೇಳಿಬರುತ್ತಿದೆ. ಅವರೇ ಸಾಹಿಬಾ ಬಾಲಿ. ಹಿಂದಿಯ ‘ಡಿಯರ್ ಮಾಯಾ’, ‘ಲೈಲಾ ಮಜ್ನು’ ಸೇರಿ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಸಾಹಿಬಾ ಜತೆ ಅರ್ಜುನ್ ಕಪೂರ್ ಡೇಟಿಂಗ್‌ನಲ್ಲಿದ್ದು, ಕೆಲ ದಿನಗಳಿಂದ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಸಾಹಿಬಾ ಮತ್ತು ಅರ್ಜುನ್ ಲಾರ್ಡ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾನುವಾರ ನಡೆದ ಭಾರತ-ಇಂಗ್ಲೆಂಡ್ ನಡುವಿನ ಕೊನೆಯ ಏಕದಿನ ಪಂದ್ಯವನ್ನು ಜತೆಯಾಗಿ ವೀಕ್ಷಿಸಿದ್ದಾರೆ. ಇಬ್ಬರ ೆಟೋ ವೈರಲ್ ಆಗಿ ಜಾಲತಾಣದಲ್ಲಿ ಮತ್ತಷ್ಟು ಸುದ್ದಿ ಹರಿದಾಡಿದೆ. ಹೀಗಿರುವಾಗಲೇ ಸಾಹಿಬಾ ಈ ಬಗ್ಗೆ ಇದೀಗ ಮೌನ ಮುರಿದಿದ್ದಾರೆ. ‘ಎಲ್ಲವನ್ನೂ ನಂಬಬೇಡಿ’ ಎಂದು ಅರ್ಜುನ್ ಜತೆಗಿನ ೆಟೋ ಹಂಚಿಕೊಂಡು ಪೋಸ್ಟ್ ಮಾಡಿ, ಇಬ್ಬರೂ ್ರೆಂಡ್ಸ್ ಅಷ್ಟೇ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. -ಏಜೆನ್ಸೀಸ್