ನ್ಯೂಸ್

ರಾಗಿಣಿಗಾಗಿ ಪಾಲಕರು ತಂದ ಬಟ್ಟೆಯನ್ನು ದೇವಸ್ಥಾನದ ಎದುರು ಇಟ್ಟ ಪೊಲೀಸರು

ಆನೇಕಲ್: ಮೊನ್ನೆ ಜೈಲು ಸೇರಿರುವ ನಟಿ ರಾಗಿಣಿಯ ಪಾಲಕರು ದಿನಕ್ಕೊಮ್ಮೆ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಇಂದು ಮಗಳಿಗಾಗಿ ಒಂದಷ್ಟು ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದಾರೆ.

ರಾಗಿಣಿ ಪಾಲಕರು ತಂದಿರುವ ಬಟ್ಟೆಯನ್ನು ಪೊಲೀಸರು ಸಂಪೂರ್ಣವಾಗಿ ಚೆಕ್ಕ ಮಾಡಿದ್ದಾರೆ. ಆ ಬ್ಯಾಗ್​ನಲ್ಲಿ ಇರುವ ಪ್ರತಿಯೊಂದು ವಸ್ತುಗಳನ್ನೂ ತಪಾಸಣೆ ಮಾಡಿದ್ದಾರೆ. ಬ್ಯಾಗ್​​ನಲ್ಲಿ ಮೂರು ಪುಸ್ತಕಗಳು, ಬಟ್ಟೆ ಮತ್ತು ದಿನಬಳಕೆ ವಸ್ತುಗಳು ಇವೆ.

ಇದೀಗ ಕರೊನಾ ಇರುವುದರಿಂದ ಯಾರೇ ಬಟ್ಟೆಗಳನ್ನು ತಂದರೂ ಮೂರು ದಿನ ಜೈಲಿನಿಂದ ಹೊರಗಡೆ ಇಡಲಾಗುತ್ತದೆ. ಹಾಗೇ ರಾಗಿಣಿಗಾಗಿ ಅವರ ತಂದೆ ತಾಯಿ ತಂದಿರುವ ಬಟ್ಟೆಯನ್ನೂ ಜೈಲಿನ ಎದುರು ಇರುವ ದೇವಸ್ಥಾನದ ಬಳಿ ಇಡಲಾಗಿದೆ.