ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ನಟ, ನಟಿಯರು ಕೆಲವೊಮ್ಮೆ ನಿರ್ದೇಶಕರು ಸಹ ಮಿತಿ ಮೀರಿ ವರ್ತಿಸಿದ ಹಲವು ಟನೆಗಳು ವರದಿಯಾಗಿವೆ, ವರದಿಯಾಗುತ್ತಿವೆ. ಕೆಲವೊಮ್ಮೆ ಮೀಟೂ ಚಳವಳಿ ಭಾಗವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರೆ, ಕೆಲವೊಮ್ಮೆ ಎಂದೋ ನಡೆದ ಟನೆಯ ಬಗ್ಗೆ ಧೈರ್ಯ ಮಾಡಿಕೊಂಡು ಇಂದು ಮಾತನಾಡುತ್ತಿರುವ ಉದಾಹರಣೆಗಳೂ ಇವೆ. ಆದರೆ, ಇಂತಹ ಪ್ರಕರಣಗಳಲ್ಲಿ ಬಹುತೇಕ ನಟ, ನಟಿಯರು ಅವರಿಗೆ ತೊಂದರೆ ನೀಡಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸದೇ ಇರುವುದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನೂ ಮೂಡಿಸಿದೆ. ಇದೆಲ್ಲದರ ನಡುವೆಯೇ ಇತ್ತೀಚೆಗಷ್ಟೆ ಮರಾಠಿ ರಂಗಭೂಮಿ, ಕಿರುತೆರೆ, ಸಿನಿಮಾ ಸೇರಿ ಹಿಂದಿ ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಪ್ರಿಯಾ ಬಾಪಟ್, ಶೂಟಿಂಗ್ ಸಮಯದಲ್ಲಿ ತಮ್ಮ ಜತೆ ಸಹನಟ ಎಲ್ಲೆ ಮೀರಿ ವರ್ತಿಸಿದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. "ನಾನಾಗ ಚಿತ್ರರಂಗಕ್ಕೆ ಹೊಸಬಳು. ನಮ್ಮ ಚಿತ್ರದ ಹಾಡೊಂದರ ಶೂಟಿಂಗ್ ಭೋಪಾಲ್ನಲ್ಲಿ ನಡೆಯುತ್ತಿತ್ತು. ಹಾಡಿನಲ್ಲಿ ಒಂದು ಮುತ್ತಿನ ಸನ್ನಿವೇಶವಿತ್ತು. ಕಿಸ್ ಬೇಕಾ? ಅಂತ ರಿಹರ್ಸಲ್ ಸಮಯದಲ್ಲಿ ನಿರ್ದೇಶಕರ ಬಳಿ ಹಲವು ಬಾರಿ ಕೇಳಿದರೂ ಸರಿಯಾದ ಉತ್ತರ ಸಿಗಲಿಲ್ಲ. ಹೀಗಾಗಿ ಮೊದಲೇ ಒಪ್ಪಿದ್ದ ಕಾರಣ, ಮುಗಿಸಿಕೊಡಲು ನಿರ್ಧರಿಸಿದೆ. ಆದರೆ, ಶೂಟಿಂಗ್ ಸಮಯದಲ್ಲಿ ಸಹನಟ ನನ್ನ ಜತೆ ತುಂಬ ಕೆಟ್ಟದಾಗಿ ನಡೆದುಕೊಂಡ. ಆಗ ಹೊಸಬಳಾಗಿದ್ದ ಕಾರಣ ಇಂತಹ ಟನೆಗಳನ್ನು ಹೇಗೆ ನಿಭಾಯಿಸಬೇಕು ಅಂತ ತಿಳಿಯದೇ ಸುಮ್ಮನಿದ್ದೆ. ಆ ಬಳಿಕವೂ ಹೋಟೆಲ್ನಲ್ಲಿ ತಂಗಿದ್ದಾಗ ಪದೇ ಪದೆ ಊಟಕ್ಕೆ, ತಿಂಡಿಗೆ ಕರೆಯುತ್ತಿದ್ದ. ನನಗೂ ನೋಡಿ ಸಾಕಾಗಿ, ಪತಿಗೆ (ಉಮೇಶ್ ಕಾಮತ್) ಕರೆ ಮಾಡಿ ತಿಳಿಸಿದೆ. ಅವರು ಮುಂಬೈನಿಂದ ಭೋಪಾಲ್ಗೆ ಬಂದು, ಮುಂದಿನ ಮೂರು ದಿನಗಳ ಕಾಲ ಶೂಟಿಂಗ್ ಮುಗಿಯುವವರೆಗೂ ನನ್ನ ಜತೆಗಿದ್ದರು' ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ "ಕಾಕಸ್ಪರ್ಶ್' ಖ್ಯಾತಿಯ ಮಹಾರಾಷ್ಟ್ರ ರಾಜ್ಯಪ್ರಶಸ್ತಿ ವಿಜೇತ ನಟಿ ಪ್ರಿಯಾ ಬಾಪಟ್. ಅವರ ಹೇಳಿಕೆ ವೈರಲ್ ಆಗಿದ್ದು, ಆ ಸಹನಟ ಯಾರು ಎಂಬುದರ ಬಗ್ಗೆ ಜಾಲತಾಣದಲ್ಲಿ ಜೋರು ಚರ್ಚೆ ನಡೆಯುತ್ತಿದೆ.
ಇದೇ ಮೊದಲಲ್ಲ ಇರುಸು-ಮುರುಸು
ರೊಮ್ಯಾಂಟಿಕ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ನಟ, ನಟಿಯರು ಮೈಮರೆತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಟನೆಗಳು ಶೂಟಿಂಗ್ ಸಮಯದಲ್ಲಿ ಸದ್ದು ಮಾಡಿವೆ. "ಅಜರ್' ಶೂಟಿಂಗ್ ಸಮಯದಲ್ಲಿ ಎಮ್ರಾನ್ ಹಷ್ಮಿ ಜತೆಗೆ ನರ್ಗಿಸ್ ಫಖ್ರಿ, 'ಫ್ಲೈಯಿಂಗ್ ಜಾಟ್' ಚಿತ್ರೀಕರಣದ ವೇಳೆ ಟೈಗರ್ ಶ್ರಾಫ್ ಮತ್ತು ಜಾಕ್ಲೀನ್ ಫರ್ನಾಂಡಿಸ್, "ದಯಾವಾನ್' ಶೂಟಿಂಗ್ ಸಮಯದಲ್ಲಿ ಮಾಧುರಿ ದೀತ್ ಜತೆ ವಿನೋದ್ ಖನ್ನಾ, "ಪ್ರೇಮ್ ಪ್ರತಿಜ್ಞಾ' ಚಿತ್ರೀಕರಣದ ವೇಳೆ ಮಾಧುರಿ ಜತೆ ರಂಜಿತ್, "ಎ ಜೆಂಟಲ್ಮ್ಯಾನ್' ಸಮಯದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಕ್ಲೀನ್, "ಐ ಡೋಂಟ್ ಲವ್ ಯು' ಸಮಯದಲ್ಲಿ ನಟಿ ಚೇತನಾ ಜತೆ ನಟ ರುಸ್ಲಾನ್, "ಯೇ ಜವಾನಿ ಹೈ ದಿವಾನಿ' ಸಮಯದಲ್ಲಿ ಈವ್ಲಿನ್ ಶರ್ಮಾ ಜತೆ ರಣಬೀರ್ ಕಪೂರ್.. ನಿರ್ದೇಶಕರು ಕಟ್ ಎಂದ ಬಳಿಕವೂ ರೊಮ್ಯಾನ್ಸ್ ಮುಂದುವರಿಸಿದ್ದರಂತೆ.