ಬೆಂಗಳೂರು: ನಟ ಯಶ್ ಅಭಿನಯದ ಕಿರಾತಕ ಸಿನಿಮಾ ನಟಿ ಒವಿಯಾ ಉತ್ತಮವಾದ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಈ ನಟಿ ಹೇಳಿರುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಓವಿಯಾ, ಸೆಕ್ಸ್‌ಗೋಸ್ಕರ ಯಾರನ್ನೋ ಒಬ್ಬನನ್ನು ವರಿಸಿ, ಅವನ ಸೇವೆ ಮಾಡಿಕೊಂಡಿರಲು ನನ್ನ ಮನಸ್ಸು ಓಪ್ಪೋಲ್ಲ. ಸುಖಾಸುಮ್ಮನೆ ಲೈಂಗಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಎಲ್ಲರೂ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬದುಕುತ್ತಿರುತ್ತಾರೆ. ಲೈಂಗಿಕ ಬಯಕೆಗೆ ಸಂಬಂಧಿಸಿದ ಹಾರ್ಮೋನ್ಸ್ ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ, ಎಂದಿದ್ದರು.
ಮದವೆ ಬಗ್ಗೆ ಕಿರಾತಕ ನಟಿ ನೀಡಿದ ಉತ್ತರಕ್ಕೆ ಬೆಪ್ಪಾದ ಅಭಿಮಾನಿಗಳು, ನೀವೇನು ಸಲಿಂಗಕಾಮಿಯೇ ಎಂದು ಪ್ರಶ್ನಿಸಿದ್ದರು. ಆದರೆ, ಅಲ್ಲವೆಂದು ಸ್ಪಷ್ಟವಾಗಿ ಉತ್ತರಿಸಿದ ನಟಿ, ಮುಂದೆ ಕಾಲ ಕೂಡಿ ಬಂದರೆ ಮಾತ್ರ ಮದ್ವೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. ಓವಿಯಾಳನ್ನು ಫಾಲೋ ಮಾಡುತ್ತಿದ್ದು, ಇಂಥ ನಟಿ ನೀಡಿದ ಹೇಳಿಕೆಯಿಂದ ಚಿತ್ರರಂಗವೇ ಬೆಚ್ಚಿ ಬಿದ್ದಂತಾಗಿತ್ತು.
ಮೂಲತಃ ಕೇರಳ ಮೂಲದವರಾದ ಒವಿಯಾ ಕನ್ನಡ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದವರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ.