ನ್ಯೂಸ್

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ನಟಿ ನಯನ ನಾಗರಾಜ್

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ‘ಗಿಣಿರಾಮ’ ಧಾರಾವಾಹಿಯ ಖ್ಯಾತಿಯ ನಯನ ನಾಗರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತಾದ ಪೋಟೋಗಳೂ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮನೆಯಲ್ಲಿ ಸರಳವಾಗಿ ನಯನ ನಾಗರಾಜ್ - ಸುಹಾಸ್ ಶಿವಣ್ಣ ಎಂಗೇಜ್‌ಮೆಂಟ್ ಮನೆಯಲ್ಲೇ ಶಾಸ್ತ್ರೋಕ್ತವಾಗಿ ಹೂ ಮುಡಿಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ನೆರವೇರಿಸಲಾಗಿದೆ. ನಯನ ನಾಗರಾಜ್ - ಸುಹಾಸ್ ಶಿವಣ್ಣ ನಿಶ್ಚಿತಾರ್ಥಕ್ಕೆ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.

'ಅಪ್‌ಗ್ರೇಡ್‌ ಬಟನ್ ಆಫ್‌ ಅವರ್ ರಿಲೇಶನ್‌ ಶಿಪ್‌' ಎಂದು ನಯನಾ ಶೀರ್ಷಿಕೆ ನೀಡಿ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.  ಸುಹಾಸ್ ಶಿವಣ್ಣ ಸಹ ರಂಗಭೂಮಿ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಸ್ಪೆಷಲಿಸ್ಟ್ ಕೂಡ ಆಗಿದ್ದಾರೆ.

ಪಾಪ ಪಾಂಡು ಧಾರಾವಾಹಿಯಲ್ಲಿಯೂ ನಯನ ನಾಗರಾಜ್ ನಟಿಸಿದ್ದರು. ರಿಯಲ್‌ ಲೈಫ್‌ನಲ್ಲಿ ನಯನಾ, ಉತ್ತಮ ಗಾಯಕಿಯೂ ಹೌದು. ಸದ್ಯ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ.