ಬೆಂಗಳೂರು: ನಟಿ ನಮಿತಾ, ಕನ್ನಡ ಸಿನಿಮಾಗಳಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ನೀಲಕಂಠ' ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಮಿತಾಗೆ ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೆಚ್ಚಾಗಿ ಗ್ಲಾಮರ್ ಲುಕ್‌ನಿಂದಲೇ ಜನಪ್ರಿಯರಾಗಿರುವ ಈ ನಟಿಯ ಕೊಂಚ ಸಣ್ಣವಾಗಿದ್ದಾರೆ ಎಂದು ಕಾಣುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಮಿತಾ ಅವರ ನಿಜವಾದ ಹೆಸರು ನಮಿತಾ ವಂಕ್ವಾಲಾ. ಗುಜರಾತ್‌ನ ಸೂರತ್‌ನಲ್ಲಿ ಜನಿಸಿದಳು. ಅವರು 1998 ರಲ್ಲಿ ಮಿಸ್ ಸೂರತ್ ಆದರು ಮತ್ತು 2001 ರಲ್ಲಿ ಮಿಸ್ ಇಂಡಿಯಾದಲ್ಲಿ ನಾಲ್ಕನೇ ಸ್ಥಾನ ಪಡೆದರು. ವೆಂಕಟೇಶ್ ಅಭಿನಯದ ಜೆಮಿನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದಳು ಈ ಮೋಹನಾಂಗಿ.
ಸೂಪರ್ ಹಿಟ್ ಸಿನಿಮಾ ನೀಡಿದ್ದ ಈ ನಟಿ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬಂದವು. ನಂತರ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಮಾಡಿದರು. ಆದರೆ ನಂತರ ಅನಿರೀಕ್ಷಿತವಾಗಿ ಸಿನಿಮಾಗಳಿಗೆ ಗ್ಯಾಪ್ ಕೊಟ್ಟು ಸಿನಿಮಾದಿಂದ ದೂರವಾದರು. ಸಿನಿಮಾ ಗ್ಯಾಪ್ ಪಡೆದ ಅಂತರದಲ್ಲಿ ನಟಿ ದೇಹದ ತೂಕವೂ ಹೆಚ್ಚಾಯಿತು. ಆದರೂ ನಟಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು.
ಸಿನಿರಂಗಕ್ಕೆ ಬಂದಾಗ ನಟಿ ನಮಿತಾ ಬಳುಕವ ಬಳ್ಳಿಯಂತಿದ್ದರು. ಆದರೆ ದಿನ ಕಳೆದಂತೆ ಹೆಚ್ಚುತ್ತಿದ್ದ ಅವರ ದೇಹದ ತೂಕದಿಂದಾಗಿ ನಮಿತಾ ಟ್ರೋಲಿಗರ ಕಣ್ಣಿಗೆ ಬಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಲ ಟ್ರೋಲ್ ಆಗಿದ್ದೂ ಇದೆ.
ತೆಲುಗು, ತಮಿಳು ಸಿನಿಮಾಗಳ ಜತೆ ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೆಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ.
ನಮಿತಾ 2017 ರಲ್ಲಿ ನಟ ಮತ್ತು ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ವಿವಾಹವಾದರು. ಅವರಿಗೆ ಅವಳಿ ಮಕ್ಕಳು ಜನಿಸಿವೆ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ನಮಿತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.
ನಮಿತಾ ವಿವಿಧ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ನಮಿತಾ ಯಾಕೆ ಇಷ್ಟು ಬದಲಾಗಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಯಾಕೆ ಎಂದರೆ ನಮೀತಾ ತೂಕ ಕಡಿಮೆ ಆದಂತೆ ಕಾಣಿಸುತ್ತಿದೆ. ನಟಿ ನಮಿತಾ ದೇಹದ ತೂಕ ಇಳಿಸಿಕೊಂಡು ಮತ್ತೆ ಮೊದಲಿನಂತೆ ಆಗುತ್ತಿದ್ದಾರೆ. ನಟಿ ವೇಟ್ಲಾಸ್ ಮಾಡಿದ್ದಾರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.