Dating: ನಟಿ ಮೃಣಾಲ್ ಠಾಕೂರ್, ತಮಿಳು ಸ್ಟಾರ್ ಹೀರೋ ಧನುಷ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇತ್ತೀಚೆಗೆ ಎಲ್ಲೆಡೆ ಹರಿದಾಡುತ್ತಿದೆ.
ಹೌದು, ಸನ್ ಆಫ್ ಸರ್ದಾರ್ -2 ಚಿತ್ರದ ಪ್ರಚಾರದ ಭಾಗವಾಗಿ ಮೃಣಾಲ್ ಠಾಕೂರ್ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿ,''ಮದುವೆಯಾಗುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ, ವಾಸ್ತವವಾಗಿ ಅದು ನನ್ನ ಬಾಲ್ಯದ ಕನಸು ಎಂದು ಹೇಳಿದರು''.ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದೇ ತಡ, ಈ ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಸುದ್ದಿ ಮತ್ತಷ್ಟು ಹೆಚ್ಚಾಯಿತು, ಇದು ಬಾಲಿವುಡ್ ಮತ್ತು ಕಾಲಿವುಡ್ ವಲಯಗಳಲ್ಲಿ ಹೊಸ ಪ್ರೇಮ ಸಂಬಂಧದ ಊಹಾಪೋಹಗಳಿಗೆ ಕಾರಣವಾಯಿತು. ಆದರೆ, ನಟಿ ಮೃಣಾಲ್ ಧನುಷ್ ಜೊತೆಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.
ಸನ್ ಆಫ್ ಸರ್ದಾರ್ 2 ಪ್ರದರ್ಶನಕ್ಕೆ ಧನುಷ್ ಅವರ ಹಾಜರಾತಿಯು ತನ್ನ ಆಹ್ವಾನದಿಂದಲ್ಲ ಎಂದು ಮೃಣಾಲ್ ಬಹಿರಂಗಪಡಿಸಿದರು.
"ಧನುಷ್ ಸನ್ ಆಫ್ ಸರ್ದಾರ್ 2 ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಯಾರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅವರನ್ನು ಆಹ್ವಾನಿಸಿದ್ದು ಅಜಯ್ ದೇವಗನ್" ಧನುಷ್ ನನಗೆ ಒಳ್ಳೆಯ ಸ್ನೇಹಿತ ಎಂದು ಹೇಳುವ ಮೂಲಕ ಇಬ್ಬರ ಮಧ್ಯೆ ಯಾವುದೇ ಡೇಟಿಂಗ್ ಇಲ್ಲ. ವದಂತಿಗಳು ಆಧಾರರಹಿತ ಎಂದು ತಳ್ಳಿಹಾಕಿದರು
ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ (ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ) ಅವರನ್ನು 18 ವರ್ಷಗಳ ಕಾಲ ವಿವಾಹವಾಗಿದ್ದ ಧನುಷ್, 2022ರಲ್ಲಿ ಅವರಿಂದ ಬೇರ್ಪಟ್ಟರು. ದಂಪತಿಗೆ ಲಿಂಗಾ ಮತ್ತು ಯಾತ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಮೃಣಾಲ್ ಠಾಕೂರ್ ಮತ್ತು ಧನುಷ್ ನಡುವಿನ ಸಂಬಂಧದ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕೂಡಿದ್ದರೂ, ನಟಿಯ ಹೇಳಿಕೆಯು ವದಂತಿಗಳಿಗೆ ಸ್ಪಷ್ಟವಾಗಿ ವಿರಾಮ ಹಾಕಿದ್ದಾರೆ. (ಏಜೆನ್ಸೀಸ್)