ನ್ಯೂಸ್

ದೀಪಾವಳಿ ಹಬ್ಬ: ಹೊಸ ಲುಕ್​ನಲ್ಲಿ ಮಾಲಾಶ್ರೀ-ಆರಾಧನಾ; ಇಲ್ಲಿವೆ ನೋಡಿ ಫೋಟೋಸ್​

ಬೆಂಗಳೂರು: ದೇಶಾದ್ಯಂತ ಬೆಳಕಿನ ಸಂಭ್ರಮ ಅದ್ದೂರಿಯಾಗಿ ಮನೆಮಾಡಿದ್ದು, ಕರುನಾಡಿನಲ್ಲಿ ದೀಪಾವಳಿ ಕಲರವ ಎಂದಿನಂತೆ ಈ ಬಾರಿಯೂ ಜೋರಾಗಿದೆ. ಹಬ್ಬದ ಸಡಗರಲ್ಲಿ ತಮ್ಮ ನೆಚ್ಚಿನ ತಾರೆಯರು ಹೇಗೆ ರೆಡಿಯಾಗುತ್ತಾರೆ? ಎಷ್ಟು ವಿಜೃಭಣೆಯಿಂದ ಸಂಭ್ರಮಿಸುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಅವರ​ ಸೋಷಿಯಲ್ ಮೀಡಿಯಾ ಖಾತೆಯನ್ನು ಚೆಕ್​ ಮಾಡುತ್ತಿರುತ್ತಾರೆ.

ಈ ಸಾಲಿನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಲ್ರಾಶ್ರೀ ಮತ್ತು ಅವರ ಪುತ್ರಿ ಆರಾಧನಾ ಹಬ್ಬಕ್ಕೆ ಹೊಸ ಲುಕ್​ನಲ್ಲಿ ಕಂಗೊಳಿಸಿದ್ದಾರೆ. ದೀಪಾವಳಿಯ ಸಲುವಾಗಿ ಅಮ್ಮ-ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

"ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ" ಎಂದು ಮಾಲ್ರಾಶ್ರೀ ತಿಳಿಸಿದ್ದಾರೆ.

"ಈ ವರ್ಷ ನನ್ನ ಮಗಳು "ಕಾಟೇರ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಪುತ್ರಿಗೂ ನೀಡಿ" ಎಂದು ಪ್ರೀತಿಯ ಅಭಿಮಾನಿಗಳಲ್ಲಿ ಮಾಲ್ರಾಶ್ರೀ ಕೇಳಿಕೊಂಡಿದ್ದಾರೆ.