ಮುಂಬೈ: ನಟ, ಆ್ಯಂಕರ್ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಾಟ್ ನಟಿಯೆಂದೇ ಫೇಮಸ್ ಆಗಿರೋ ಕುಬ್ರಾ ಸೇಠ್ ಅವರಿಗೆ ಇಂದು (ಜುಲೈ 27) ಹುಟ್ಟುಹಬ್ಬದ ಸಂಭ್ರಮ.
ಸಂದರ್ಶನದ ವಿಡಿಯೋವೊಂದು ಹುಟ್ಟುಹಬ್ಬದ ಅಂಗವಾಗಿ ಮತ್ತೆ ವೈರಲ್ ಆಗುತ್ತಿದೆ. ಇದು ಸೆಕ್ರೆಡ್ ಗೇಮ್ಸ್ ವೆಬ್ ಸರಣಿಯಲ್ಲಿ ನಟ ನವಾಜುದ್ದೀನ್ ಸಿದ್ಧಕಿ ಅವರ ಜತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಬಿಡುಗಡೆಯಾದ ಮೇಲೆ ಸಾಕಷ್ಟು ಹಲ್ಚಲ್ ಕೂಡ ಸೃಷ್ಟಿಸಿತ್ತು. ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದ ಕುಬ್ರಾ, ಡಾನ್ ಗಣೇಶ್ ಗಾಯ್ತೊಂಡೆ ಪಾತ್ರ ಮಾಡುತ್ತಿರುವ ನವಾಜುದ್ದೀನ್ ಸಿದ್ಧಕಿ ಜೊತೆ ಹಲವಾರು ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದನ್ನು ಮಾಡುವುದು ತಮಗೆ ಅಷ್ಟು ಸುಲಭವಾಗಿರಲಿಲ್ಲ ಎಂದು ಕುಬ್ರಾ ಹೇಳಿದ್ದಾರೆ.
ಸೆಕ್ಸ್ ಸೀನ್ ಮಾಡುವ ಸಂದರ್ಭದಲ್ಲಿ ಏಳು ಬಾರಿ ರೀ ಟೇಕ್ ಮಾಡಲಾಯಿತು. ಪ್ರತಿ ಬಾರಿ ಸೆಕ್ಸ್ ಸೀನ್ ಮಾಡಿದಾಗಲೂ ಅದು ಸರಿ ಬರುತ್ತಿರಲಿಲ್ಲ ಎಂದು ಹಲವು ಬಾರಿ ಮಾಡಿಸಿದ್ರು. ಇದು ನನಗೆ ಶಾಕ್ ಕೊಟ್ಟಿತ್ತು. ಶೂಟಿಂಗ್ ಆದ ಮೇಲೆ ತುಂಬಾ ಅಳುತ್ತಿದ್ದೆ ಎಂದಿದ್ದಾರೆ.
ಕೂಬಾ ಡೈವಿಂಗ್ ಕಲಿತ ಬಳಿಕ ಅಂಡಮಾನ್ ಸಮುದ್ರದಲ್ಲಿ ಡೈವಿಂಗ್ ಮಾಡಲು ಸ್ನೇಹಿತನ ಜೊತೆ ಹೋದಾಗ ಆದ ಘಟನೆಯನ್ನು ವಿವರಿಸಿದ್ದಾರೆ. ಆ ಸ್ನೇಹಿತನ ಜೊತೆ ಮೈಮರೆತೆ. ಆತನ ಜೊತೆ ತುಂಬಾ ಕಂಫರ್ಟಬಲ್ ಎನಿಸಿ ಸೆಕ್ಸ್ ಮಾಡಿಬಿಟ್ಟೆ. ನಂತರ ಶೂಟಿಂಗ್ನಲ್ಲಿ ಪಾಲ್ಗೊಂಡು ಆ ವಿಚಾರವನ್ನು ಮರೆತು ಬಿಟ್ಟಿದ್ದೆ. ಆದರೆ ಮೂರು ತಿಂಗಳು ಪಿರಿಯಡ್ ಆಗದೇ ಇರುವುದು ನನ್ನ ಗಮನಕ್ಕೆ ಬರಲೇ ಇಲ್ಲ. ಆ ನಂತರ ಅರಿವಾಗಿ ಶಾಕ್ಗೆ ಒಳಗಾದೆ ಎಂದ ನಟಿ, ಗರ್ಭಿಣಿಯಾಗಿದ್ದು ಪರೀಕ್ಷೆಯಿಂದ ತಿಳಿಯಿತು. ಆದರೆ ಆ ವ್ಯಕ್ತಿ ನನ್ನ ಕಡೆ ತಿರುಗಿಯೇ ನೋಡಲಿಲ್ಲ. ಇದರಿಂದ ಅನಿವಾರ್ಯವಾಗಿ ಅಬಾಷನ್ ಮಾಡಿಕೊಳ್ಳಬೇಕಾಯಿತು ಎಂದಿದ್ದಾರೆ.
ಬಾಲ್ಯದಲ್ಲಿ .ನನಗೆ ನನ್ನ ಅಂಕಲ್ ಲೈಂಗಿಕ ಕಿರುಕುಳ ಕೊಡುತ್ತಿದ್ದರು. ನಾನು ಬೇಡ ಎಂದು ಎಷ್ಟು ಸಲ ಹೇಳಿದ್ದರೂ ಅರ್ಥವಾಗುತ್ತಿರಲಿಲ್ಲ. ಲೈಂಗಿಕವಾಗಿ ಬಳಸಿಕೊಂಡರು. ಪ್ರತಿಯೊಂದು ವಿಚಾರ ಹಂಚಿಕೊಂಡಿರುವೆ ಅದೇ ಧೈರ್ಯದ ಮೇಲೆ ಪುಸ್ತಕ ಬರೆದಿರುವೆ ಎಂದಿದ್ದಾರೆ.
'ಸೆಕ್ರೆಡ್ ಗೇಮ್ಸ್' ವೆಬ್ ಸೀರಿಸ್ನಲ್ಲಿ ತೃತೀಯ ಲಿಂಗಿ ಪಾತ್ರ ಮಾಡುವ ಸಕತ್ ಫೇಮಸ್ ಆಗಿರೋ ನಟಿ ಕುಬ್ರಾ ಸೇಠ್. ಅಪರೂಪಕ್ಕೊಮ್ಮೆ ಸಿನಿಮಾ ಮಾಡಿದರೂ, ಇಂಟಿಮೇಟ್ ದೃಶ್ಯಗಳು, ಹಾಟ್ ದೃಶ್ಯಗಳಿಂದಲೇ ಸದ್ದು ಮಾಡುತ್ತಾರೆ.