ಮಲಯಾಳಂ ನಟಿ ಕವಿತಾ ಲಕ್ಷ್ಮಿ  
ನ್ಯೂಸ್

15 ವರ್ಷ ಸೀರಿಯಲ್​, ಕೇವಲ 3000 ರೂ. ಸಂಬಳ! ಕಡೆಗೂ ನಟನೆ ತೊರೆದು ಡೆಲಿವರಿ ಗರ್ಲ್​ ಆದ ಮಲಯಾಳಂ ನಟಿ

ಪ್ರಮುಖ ಮುಖ್ಯಾಂಶಗಳು

  • 15 ವರ್ಷ ಧಾರವಾಹಿಯಲ್ಲಿ ಕೆಲಸ, ಈಗ ಡೆಲಿವರಿ ಗರ್ಲ್​
  • ನಟನಾ ವೃತ್ತಿ ತೊರೆದು ಫುಡ್​ ಕಾರ್ಟ್ ನಡೆಸಿ​, ಡೆಲಿವರಿ ಗರ್ಲ್ ಆಗಿ ಕೆಲಸ
  • ಮಕ್ಕಳ ಭವಿಷ್ಯಕ್ಕಾಗಿ ಈ ಕೆಲಸಗಳ ಅವಲಂಬನೆ
ಕೇರಳ: 15 ವರ್ಷ ಸೀರಿಯಲ್​ನಲ್ಲಿ ದುಡಿದ ಮಲಯಾಳಂ ನಟಿ ಕವಿತಾ ಲಕ್ಷ್ಮಿ, ಇದೀಗ ಬೆಳ್ಳಿತರೆ ಹಾಗೂ ಕಿರುತೆರೆಗೆ ಗುಡ್​ಬೈ ಹೇಳಿ ತಮ್ಮದೇ ಸ್ವಂತ ಕಿರು ಹೋಟೆಲ್​ ನಡೆಸುತ್ತ, ಡೆಲಿವರಿ ಗರ್ಲ್​ ಆಗಿ ಕೆಲಸ ಮಾಡುತ್ತಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಸ್ವತಃ ನಟಿಯೇ ತಮ್ಮ ಕಷ್ಟದ ದಿನಗಳ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಕೂಡಿಡುವ ಗುರಿಯನ್ನು ಹೊಂದಿರುವ ಕವಿತಾ, ಆರಂಭದಲ್ಲಿ ನಟನಾ ವೃತ್ತಿಗೆ ವಿದಾಯ ಹೇಳಿ ಮಗನ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಫುಡ್​ಕಾರ್ಟ್​ ಪ್ರಾರಂಭಿಸಿದ್ದರು. ಆದರೀಗ, ಮಗಳ ವಿದ್ಯಾಭ್ಯಾಸಕ್ಕಾಗಿ ಡೆಲಿವರಿ ಗರ್ಲ್ ಆಗಿಯೂ ಕೆಲಸ ಮಾಡುತ್ತಿರುವುದು ನಿಜಕ್ಕೂ ಮನಕಲಕುತ್ತದೆ. ಡೆಲಿವರಿ ಗರ್ಲ್​ ಆಗಿ ಲಕ್ಷ್ಮಿ, ವಾರಕ್ಕೆ 14,000 ರೂ. ಸಂಪಾದನೆ ನೋಡುತ್ತಾರಂತೆ. ಸಾಲ ಮತ್ತು ಮಗಳ ಖರ್ಚುಗಳನ್ನು ಇದರಿಂದ ಬಂದ ಹಣದಿಂದಲೇ ಪಾವತಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.
"ಈ ನಡುವೆ, ನಾನು ಒಂದಷ್ಟು ಚಿತ್ರಗಳನಷ್ಟೇ ಮಾಡಿದ್ದೇನೆ. 15 ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಸೀರಿಯಲ್​ನಲ್ಲಿ ಅವರು ಕೊಡುತ್ತಿದ್ದ ಸಂಬಳ ಕೇವಲ 3000ರಿಂದ 3500 ರೂ. ಮಾತ್ರ. ಅದರಲ್ಲೂ, ಆಯಾ ಧಾರಾವಾಹಿಗಳಿಗೆ ನನ್ನದೇ ಆದ ಡ್ರೆಸ್​ ಮತ್ತು ಚಪ್ಪಲಿಗಳನ್ನು ಖರೀದಿಸಬೇಕಿತ್ತು. ಅದು ನನಗೆ ಬರುತ್ತಿದ್ದ ಸಂಬಳದಲ್ಲಿ ಸಾಲುತ್ತಿರಲಿಲ್ಲ" ಎಂದಿದ್ದಾರೆ ಲಕ್ಷ್ಮಿ,(ಏಜೆನ್ಸೀಸ್).