ನವದೆಹಲಿ: 'ಬೃಂದಾವನ' ಸಿನಿಮಾದಲ್ಲಿ ನಟ ದರ್ಶನ್ ಅವರಿಗೆ ಜೋಡಿಯಾಗಿ ನಟಿಸಿದ್ದ ನಟಿ ಕಾರ್ತಿಕಾ ನಾಯರ್ ಒಂದು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಭಾವಿ ವರನ ಫೋಟೋಗಳನ್ನು ಬಹಿರಂಗಪಡಿಸಿಲ್ಲ. ಈಗ ಕೊನೆಗೆ ತಾನು ಮದುವೆಯಾಗಲಿರುವ ವ್ಯಕ್ತಿಯ ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಿರಿಯ ನಾಯಕಿ ರಾಧಾ ನಾಯರ್ ಕೂಡ ತಮ್ಮ ಮಗಳ ನಿಶ್ಚಿತಾರ್ಥವನ್ನು ಹಂಚಿಕೊಂಡಿದ್ದಾರೆ ಆದರೆ ತಮ್ಮ ಭಾವಿ ಅಳಿಯ ಯಾರು ಎಂಬುದನ್ನು ಬಹಿರಂಗಪಡಿಸಲಿಲ್ಲ. ಇದೀಗ ಕಾರ್ತಿಕಾ ತಮ್ಮ ಭಾವಿ ಪತಿಯ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.
ರೋಹಿತ್ ಮೆನನ್ ಎಂಬ ವ್ಯಕ್ತಿಯನ್ನು ಮದುವೆಯಾಗುವುದಾಗಿ ಕಾರ್ತಿಕಾ ಇನ್‌ಸ್ಟಾಗ್ರಾಮ್ ಮೂಲಕ ಘೋಷಿಸಿದರು. ಅವರು ತಮ್ಮ ನಿಶ್ಚಿತಾರ್ಥದ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಕಾರ್ತಿಕಾ ಭಾವಿ ಪತಿ ರೋಹಿತ್ ಅವರ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ. ರೋಹೀತ್ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ತಿಕಾ ರೋಹಿತ್ ಅವರ ಇನ್‌ಸ್ಟಾಗ್ರಾಮ್ ಪುಟವನ್ನು ಹಂಚಿಕೊಂಡಿದ್ದಾರೆ ಆದರೆ ಖಾತೆಯನ್ನು ಖಾಸಗಿಯಾಗಿಟ್ಟಿದ್ದಾರೆ.
"ನಿಮ್ಮನ್ನು ಭೇಟಿಯಾಗುವುದು ಅದೃಷ್ಟ.. ನಿಮ್ಮನ್ನು ಇಷ್ಟಪಡುವುದು ಮ್ಯಾಜಿಕ್.. ನಮ್ಮ ಜೀವನ ಪಯಣವನ್ನು ಪ್ರಾರಂಭಿಸಲು ನಾನು ಕ್ಷಣಗಣನೆಯನ್ನು ಪ್ರಾರಂಭಿಸಿದ್ದೇನೆ" ಎಂದು ಕಾರ್ತಿಕಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಕಾರ್ತಿಕಾ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.
ಚಿತ್ರರಂಗದಲ್ಲಿ ಮಿಂಚಿರುವ ನಟಿ ರಾಧಾ ಮುದ್ದಿನ ಮಗಳ ಕಾರ್ತಿಕಾ ನಾಯರ್. ಕಾರ್ತಿಕಾ ನಾಯರ್ 2009 ರಲ್ಲಿ ತಮ್ಮ ಚೊಚ್ಚಲ ಚಿತ್ರ ಜೋಶ್‌ನೊಂದಿಗೆ ಖ್ಯಾತಿಯನ್ನು ಗಳಿಸಿದರು ಮತ್ತು 2011 ರಲ್ಲಿ ರಂಗಂ ಚಿತ್ರದ ಮೂಲಕ ಯಶಸ್ಸನ್ನು ಗಳಿಸಿದರು. ಅವರು ತೆಲುಗು, ಮಲಯಾಳಂ ಮತ್ತು ತಮಿಳು, ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸೌಂದರ್ಯ, ನಟನೆ ಇದ್ದರೂ ಕಾರ್ತಿಕಾಗೆ ಅದೃಷ್ಟ ಒಲಿಯಲಿಲ್ಲ. 2015ರ ನಂತರ ಕಾರ್ತಿಕಾಗೆ ತೆಲುಗು ಇಂಡಸ್ಟ್ರಿಯಲ್ಲಿ ನಿರೀಕ್ಷೆಯಷ್ಟು ಅವಕಾಶಗಳು ಸಿಗದ ಕಾರಣ ಕಾರ್ತಿಕಾ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.