ಹೆಬಾ ಪಟೇಲ್​ 
ನ್ಯೂಸ್

Hebah Patel - 12 ವರ್ಷಗಳ ನಂತರ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಿದ "ಅಧ್ಯಕ್ಷ' ನಾಯಕಿ

Hebah Patel-
"ಅಧ್ಯಕ್ಷ' ಮೂಲಕ 2014ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಹೆಬಾ ಪಟೇಲ್​. ನಂತರ 2015ರಲ್ಲಿ ತೆಲುಗಿಗೆ ಪದಾರ್ಪಣೆ ಮಾಡಿದ ಅವರು "ಕುಮಾರಿ 21 ಎ್​'ನಲ್ಲಿ ನಟಿಸಿದ್ದರು. ಎರಡು ಚಿತ್ರಗಳು ಹಿಟ್​ ಆಗಿದ್ದವು. ಆದರೆ, ಹೆಬಾ ತೆಲುಗಿನಲ್ಲಿ ಹೆಚ್ಚು ಬಿಜಿಯಾದರು. ಕ್ರಮೇಣ ತಮಿಳಿನಲ್ಲೂ ನಟಿಸಿದರು. ಇದೀಗ 12 ವರ್ಷಗಳ ನಂತರ "ರಾಮರಸ' ಚಿತ್ರದಲ್ಲಿ ಸ್ಪೆಷಲ್​ ಸಾಂಗ್​ನಲ್ಲಿ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಿರುವ ಹೆಬಾ, ಜತೆಗೆ "ರುದ್ರ ಕಾಲ' ಮೂಲಕ ನಾಯಕಿಯಾಗಿಯೂ ವಾಪಸ್ಸಾಗಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ""ಅಧ್ಯಕ್ಷ' ಬಳಿಕ ಬರದ ಕನ್ನಡ ಆರ್​ಗಳು, ತೆಲುಗಿನ "ಕುಮಾರಿ...' ನಂತರ ಹೆಚ್ಚಾದವು. ಆದರೆಮ ಟಾಲಿವುಡ್​ನಲ್ಲಿ ಹೆಚ್ಚು ಆರ್​ಗಳಿದ್ದ ಕಾರಣ, ಅಲ್ಲಿಯೇ ಮುಂದುವರಿದೆ. ಆಗಿನಿಂದಲೂ ಆಗಾಗ ಕನ್ನಡದಲ್ಲೂ ಕಥೆ ಕೇಳುತ್ತಿದ್ದೆ. ಇದೀಗ "ರುದ್ರ ಕಾಲ' ಕಥೆ ಇಷ್ಟವಾಗಿ, ಒಪ್ಪಿದೆ. ಫ್ಯಾಮಿಲಿ ಡ್ರಾಮಾ, ಹಾರರ್​, ಹಾರರ್​ ಕಾಮಿಡಿ, ಕಂಪ್ಲೀಟ್​ ಕಾಮಿಡಿ... ಎಲ್ಲ ಬಗೆಯ ಚಿತ್ರಗಳಲ್ಲೂ ನಟಿಸಲು ಇಷ್ಟ. ಆದರೆ, ನನಗೆ ಕ್ರೈಮ್​ ಥ್ರಿಲ್ಲರ್​ ನೋಡಲು, ನಟಿಸಲು ಹೆಚ್ಚು ಇಷ್ಟ. "ರುದ್ರ ಕಾಲ' ಕೂಡ ಕ್ರೈಮ್​ ಥ್ರಿಲ್ಲರ್​ ಆದ ಕಾರಣ ಒಪ್ಪಿದೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರಲಿದೆ' ಎಂದು ಮಾಹಿತಿ ನೀಡುತ್ತಾರೆ.

ಮುಂದಿನ ಚಿತ್ರಗಳು

"ಚಿತ್ರಗಳ ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಮುಖ್ಯ ಎನ್ನುವ' ಹೆಬಾ, "ಕೆಲ ಚಿತ್ರಗಳು ಆತ್ಮತೃಪ್ತಿ ನೀಡುತ್ತವೆ, ಕೆಲ ಚಿತ್ರಗಳು ಹೊಟ್ಟೆ ತುಂಬಿಸುತ್ತವೆ. ಹೀಗಾಗಿ ಗುಣಮಟ್ಟದ ಚಿತ್ರಗಳೂ ಬೇಕು, ಹೆಚ್ಚು ಸಿನಿಮಾಗಳಲ್ಲೂ ನಟಿಸಬೇಕು. ಕನ್ನಡದಲ್ಲಿ "ರಾಮರಸ', "ರುದ್ರ ಕಾಲ' ಜತೆಗೆ ತಮಿಳಿನಲ್ಲಿ ಬಾಬಿ ಸಿಂಹ ಜತೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಜತೆಗೆ ತೆಲುಗಿನಲ್ಲೂ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಈ ವರ್ಷ ಮೂರು ಭಾಷೆಗಳಲ್ಲೂ ತಲಾ ಒಂದು ಸಿನಿಮಾ ಬರಲಿವೆ' ಎಂದು ಹೇಳಿಕೊಳ್ಳುತ್ತಾರೆ.

ಮರುಜೀವ ನೀಡಿದ್ದೇ ಒಟಿಟಿ!

ಒಟಿಟಿ ಪ್ರಾಮುಖ್ಯದ ಬಗ್ಗೆ ಹೆಬಾ, "2018, 19ರಲ್ಲಿ ನನ್ನ ತೆಲುಗು ಚಿತ್ರಗಳು ್ಲಾಪ್​ ಆಗಿದ್ದವು. ಅವಕಾಶವಿಲ್ಲದೇ ಮನೆಯಲ್ಲಿದ್ದೆ. 2020ರಲ್ಲಿ "ಒದೆಲ ರೈಲ್ವೇ ಸ್ಟೇಷನ್​' ಆರ್​ ಬಂತು. ಮನೆಯಲ್ಲಿ ಕುಳಿತು ಏನು ಮಾಡುವುದು ಅಂತ ಅದರಲ್ಲಿ ನಟಿಸಿದೆ. ಆ ಸಿನಿಮಾ ನನಗೆ ಒಂದೊಳ್ಳೆ ಒಟಿಟಿ ಮಾರ್ಕೆಟ್​ ಸೃಷ್ಟಿಸಿತು. ಕಳೆದ ಡಿಸೆಂಬರ್​ನಲ್ಲಿ ಮತ್ತೊಂದು ಒಟಿಟಿ ಸಿನಿಮಾ ರಿಲೀಸ್​ ಆಯಿತು. ಈಗ ನಾಲ್ಕೆ$ದು ತಿಂಗಳ ಬಳಿಕವೂ ಅದು ಟ್ರೆಂಡಿಂಗ್​ನಲ್ಲಿದೆ. ಒಟಿಟಿ ವೇದಿಕೆಗಳು ಜನರು ಮನರಂಜನೆಯನ್ನು ನೋಡುವ ರೀತಿಯನ್ನೇ ಬದಲಿಸಿವೆ' ಎನ್ನುತ್ತಾರೆ.

ವಿವಾದಗಳಿಂದ ದೂರ

ಕಳೆದ 12 ವರ್ಷಗಳಲ್ಲಿ ಮೂರು ಚಿತ್ರರಂಗಗಳಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ, ಹೆಬಾ ವಿವಾದಗಳಿಂದ ಹಾಗೂ ರೂಮರ್​ಗಳಿಂದ ದೂರ. "ಕಲಾವಿದರಿಗೆ ನಟನೆಯೇ ಜೀವನ ಅಥವಾ ವ್ಯಕ್ತಿತ್ವವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ನಾನು ಸಿನಿಮಾ ಕರಿಯರ್​ ಪ್ರಾರಂಭದಲ್ಲೇ ನಟನೆಯನ್ನು ವೃತ್ತಿಯಂತೆ ಮಾತ್ರ ನೋಡಲು ನಿರ್ಧರಿಸಿದ್ದೆ. ಪ್ಯಾಕಪ್​ ಬಳಿಕ ನಾನು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ. ಎಮರ್ಜೆನ್ಸಿ ಇದ್ದರಷ್ಟೇ ಅದರ ಬಗ್ಗೆ ಮಾತು. ಚಿತ್ರತಂಡದವರ ಹುಟ್ಟುಹಬ್ಬ ಅಥವಾ ತಂಡದ ಸಕ್ಸಸ್​ ಆಚರಣೆ ಇದ್ದರೆ ಮಾತ್ರ ಹೋಗುತ್ತೇನೆ. ಇಲ್ಲದಿದ್ದರೆ ಚಿತ್ರರಂಗದವರ ಜತೆ ಪಾರ್ಟಿಗಳಿಗೆ ಹೋಗುವುದಿಲ್ಲ. ಚಿತ್ರರಂಗದ ಜತೆ ಒಡನಾಟವಿಲ್ಲದ ಹಳೆಯ ಶಾಲೆ, ಕಾಲೇಜು ದಿನಗಳ ಫ್ರೆಂಡ್ಸ್​ ಜತೆ ಹೆಚ್ಚು ಕಾಲ ಕಳೆಯುತ್ತೇನೆ' ಎನ್ನುತ್ತಾರೆ.