ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನಲ್ಲಿ ಶ್ರೇಷ್ಠಾ ಪಾತ್ರದಲ್ಲಿ ನಟಿಸುತ್ತಿದ್ದ ಗೌತಮಿ ಗೌಡ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ.
ಜಾರ್ಜ್ ಕ್ರಿಸ್ಟಿ ಹಾಗೂ ಗೌತಮಿ ಗೌಡ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 3 ವರ್ಷ ಪರಸ್ಪರ ಪ್ರೀತಿಸಿದ ಈ ಜೋಡಿ ಕುಟುಂಬಸ್ಥರ ಒಪ್ಪಿಗೆ ಪಡೆದು ಹಿಂದೂ ಸಂಪ್ರದಾಯ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದರು.
‘ಚಿ ಸೌ ಸಾವಿತ್ರಿ’, ‘ತಾಯವ್ವ’, ‘ಚೆಲುವಿ’, ‘ಚೆಲಿಸುವ ಮೋಡಗಳು’, ‘ಭಾಗ್ಯಲಕ್ಷ್ಮೀ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿರುವ ನಟಿ ಗೌತಮಿ ಗೌಡ. ‘ಮಳೆ’, ‘ಜೆಸ್ಸಿ’, ‘ಅಂಬಿ ನಿಂಗ್ ವಯಸ್ಸಾಯ್ತೋ’ ಮುಂತಾದ ಸಿನಿಮಾಗಳಲ್ಲಿ ಮಿಂಚಿರುವ ನಟಿ ಗೌತಮಿ ಗೌಡ. ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ತಾಂಡವ್ ಪಾತ್ರಧಾರಿಯ ಗರ್ಲ್‌ಫ್ರೆಂಡ್ ಆಗಿ ಗೌತಮಿ ನಟಿಸಿದ್ದರು. ಇತ್ತೀಚೆಗಷ್ಟೇ ಈ ಧಾರಾವಾಹಿಯಿಂದ ನಟಿ ಹೊರಬಂದಿದ್ದಾರೆ.
https://www.vijayavani.net/tiger-claw-pendant-complaint-against-actor-darshan-vinay-guruji